ಬೆಂಗಳೂರು ಆಗಸ್ಟ್.25: ಬೆಂಗಳೂರಿನಲ್ಲಿ ಮತ್ತೊಮ್ಮೆ ಲಾಂಗು ಮಚ್ಚುಗಳ ಕಾದಾಟ ಶುಉರವಾಘಿದ್ದು, ಮತ್ತೆರಡು ಬಲಿ ಪಡೆದುಕೊಂಡಿದೆ. ರೌಡಿ ಶೀಠರ್ ಮಝ ಅಲಿಯಾಸ್ ತಮ್ಮ ಮಂಜ ಮತ್ತು ನವೀನ್ ಹತ್ಯೆಗೊಳಗಾಗಿದ್ದಾರೆ.. ಅಷ್ಟಕ್ಕೂ ನಡೆದಿರೋದು ಏನು ಗೊತ್ತಾ..?
ತಲಘಟ್ಟಪುರ ಹಾಗೂ ಕುಮಾರಸ್ವಾಮಿ ಲೇಔಟ್‍ನಲ್ಲಿ ರೌಡಿಶೀಟ್ ಲಿಸ್ಟ್ನಲ್ಲಿರುವಾತ ತಮ್ಮ ಮಂಜ. ಬಿಲ್ಡರ್ ಒಬ್ಬರ ಮಗನಾಗಿರುವ ನವೀನ್ ಜೊತೆಗೆ ನಿನ್ನೆ ರಾತ್ರಿ ಆಕ್ಟೀವಾದಲ್ಲಿ ತಮ್ಮ ಮಂಜನ ಜೊತೆ ಊಟಕ್ಕೆ ಹೋಗಿದ್ದರು. ಈ ವೇಳೆ 5-6 ಹಂತಕರ ಟೀಂ ಐಟ್ವೆಂಟಿ ವಾಹನದಲ್ಲಿ ಹಿಂದಿದ ಬಂದು ಗುದ್ದಿ ಬಳಿಕ ನಡುರಸ್ತೆಯಲ್ಲಿ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದಾರೆನ್ನಲಾಗುತ್ತಿದೆ. ಜೆಪಿ ನಗರದ 24ನೇ ಮುಖ್ಯರಸ್ತೆಯಲ್ಲಿ ಘಟನೆ ಸಂಭವಿಸಿದ್ದು,ಕಾರಿನಲ್ಲಿ ಅಟ್ಟಾಡಿಸುವ ರಭಸದಲ್ಲಿ ಪಕ್ಕದಲ್ಲೇ ಇದ್ದ ಲೈಟ್ ಕಂಬ ಮುರಿದು ಬಿದ್ದಿದೆ.
ತಮ್ಮ ಮಂಜನ ವಿರುದ್ಧ ಈಗಾಗಲೇ 2 ಕೊಲೆ ಪ್ರಕರಣಗಳಿದ್ದು, ಈ ಪೈಕಿ ಟ್ಯಾಬ್ಲೆಟ್ ರಘು ಎಂಬ ರೌಡಿ ಹತ್ಯೆ ಪ್ರಕರಣವೂ ಒಂದು. ಈ ಪ್ರಕರಣ ಸಂಬಂಧವೆ ಈ ಹತ್ಯೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಜೆಪಿ ನಗರ ಹಾಗೂ ಪುಟ್ಟೇನಹಳ್ಳಿ ಎರಡೂ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.