ಮಾದಾರ ಚೆನ್ನಯ್ಯ ಸ್ವಾಮೀಜಿ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೊದಲ ಬಾರಿಗೆ ನಮ್ಮ ಸಮುದಾಯಕ್ಕೆ ಪ್ರಭಾವಿ ಖಾತೆ ಸಿಕ್ಕಿದೆ. ಮಾದಿಗ ಸಮುದಾಯವನ್ನು ಗುರುತಿಸಿ ಡಿಸಿಎಂ ಸ್ಥಾನ ನೀಡಲಾಗಿದೆ. ನಮ್ಮ ಸಮಾಜವನ್ನು ಇಲ್ಲಿಯವೆರೆಗೆ ರಾಜಕೀಯವಾಗಿ ಗುರುತಿಸಿಲ್ಲ. ಆದರೆ ಯಡಿಯೂರಪ್ಪನವರು ಗುರುತಿಸಿದ್ದಾರೆ, ಅವಕಾಶವನ್ನೂ ಕೊಟ್ಟಿದ್ದಾರೆ. ಅದಕ್ಕೆ ಅವರಿಗೆ ಧನ್ಯವಾದಗಳು.
ಇನ್ನು ಕೊಪ್ಪಳದಲ್ಲಿ ಅಸ್ಪøಶ್ಯತೆ ಇನ್ನೂ ಜೀವಂತವಾಗಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಿಎಂಗೆ, ನಮ್ಮ ಸಮುದಾಯದ ಡಿಸಿಎಂ ಕಾರಜೋಳ ಅವರಿಗೆ ಮನವಿ ಮಾಡ್ತೇವೆ.ಮೊದಲಿಗೆ ಹೋಲಿಸಿದರೆ ಅಸ್ಪøಶ್ಯತೆ ಸ್ವಲ್ಪ ಕಡಿಮೆಯಾಗಿದೆ. ಸಾವಿರಾರು ವರ್ಷದಿಂದ ನಡೆದುಕೊಡು ಬಂದ ಪದ್ಧತಿಯನ್ನು ಏಕಾಏಕಿ ನಿಲ್ಲಿಸುವುದು ಕಷ್ಟದ ವಿಚಾರ. ಮುಂದಿನ ದಿನಗಳಲ್ಲಿ ಸರಿಹೋಗುತ್ತದೆ ಎಂಬ ವಿಶ್ವಾಸ ನನಗಿದೆ. ಯಡಿಯೂರಪ್ಪನವರ ಸರ್ಕಾರ ಇಂತಹ ದಿಟ್ಟ ಹೆಜ್ಜೆಯಿಟ್ಟು ಬದಲಾವಣೆಯ ಹರಿಕಾರರಾಗಲಿ ಎಂಬುದಾಗಿ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ.
© 2020 Udaya News – Powered by RajasDigital.