ಬೆಂಗಳೂರು: ಶಿವಮೊಗ್ಗದಲ್ಲಿನ ಘಟನೆ ಕುರಿತಂತೆ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರ ಹಾಗೂ ಗೃಹಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಚುನಾವಣೆಗೆ ಕೆಲವೇ ತಿಂಗಳುಗಳಿವೆ, ಈ ಹೊತ್ತಿನಲ್ಲಿ ಕೋಮುಗಲಭೆ ಸೃಷ್ಟಿಸಿ ಲಾಭ ಪಡೆಯಲು ಬಿಜೆಪಿ ನೆಲ ಹದಗೊಳಿಸುತ್ತಿದೆ, ಆ ಪ್ರಕ್ರಿಯೆಯನ್ನು ಶಿವಮೊಗ್ಗದಿಂದಲೇ ಆರಂಭಿಸುವ ಹವಣಿಕೆಯಲ್ಲಿದೆ ಬಿಜೆಪಿ. ಈಶ್ವರಪ್ಪನವರ ದೇಶದ್ರೋಹ, ಸರ್ಕಾರದ ವೈಫಲ್ಯ, 40% ಕಮಿಷನ್, ಭ್ರಷ್ಟಾಚಾರ ಎಲ್ಲವನ್ನೂ ಜನರ ಮನಸ್ಸಿನಿಂದ ಮರೆಸುವ ಹುನ್ನಾರ ಬಿಜೆಪಿಯದ್ದು ಎಂದು ದೂರಿದೆ.
ಶಿವಮೊಗ್ಗದಲ್ಲಿ ಸೃಷ್ಟಿಯಾದ ಗಲಭೆಗೆ ಯಾರು ಕಾರಣ? ರಾಜ್ಯದಲ್ಲಿ ಯಾಕಾಗಿ ಕೋಮು ನೆಲಗಟ್ಟಿನಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿದೆ? ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಪ್ರಶ್ನಿಸಿರುವ ಕಾಂಗ್ರೆಸ್, ನಿಮ್ಮ ತವರು ಜಿಲ್ಲೆಯಲ್ಲೇ ಕಾನೂನು ಸುವ್ಯವಸ್ಥೆ ಕಾಪಾಡಲಾಗದ್ದು ನಿಮ್ಮ ವೈಫಲ್ಯವಲ್ಲವೇ? ಅಥವಾ ಕೋಮು ಕಿಡಿಯನ್ನು ಅಲ್ಲಿಂದಲೇ ಆರಂಭಿಸುವ ಹುನ್ನಾರವೇ? ಎಂದು ಟೀಕಿಸಿದೆ.
ಶಿವಮೊಗ್ಗದಲ್ಲಿ ಸೃಷ್ಟಿಯಾದ ಗಲಭೆಗೆ ಯಾರು ಕಾರಣ? ರಾಜ್ಯದಲ್ಲಿ ಯಾಕಾಗಿ ಕೋಮು ನೆಲಗಟ್ಟಿನಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿದೆ?@JnanendraAraga ಅವರೇ, ನಿಮ್ಮ ತವರು ಜಿಲ್ಲೆಯಲ್ಲೇ ಕಾನೂನು ಸುವ್ಯವಸ್ಥೆ ಕಾಪಾಡಲಾಗದ್ದು ನಿಮ್ಮ ವೈಫಲ್ಯವಲ್ಲವೇ? ಅಥವಾ ಕೋಮು ಕಿಡಿಯನ್ನು ಅಲ್ಲಿಂದಲೇ ಆರಂಭಿಸುವ ಹುನ್ನಾರವೇ?
— Karnataka Congress (@INCKarnataka) February 21, 2022