ರಾಕಿಂಗ್ ಸ್ಟಾರ್ ಯಶ್‍ಗೆ ಇಂದು 34 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.. ಕೆ.ಜಿ.ಎಫ್ -2 ಶೂಟಿಂಗ್‍ನಲ್ಲಿ ಬ್ಯುಸಿಯಿರುವ ರಾಕಿಬಾಯ್ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಮಂಗಳವಾರ ಮಧ್ಯರಾತ್ರಿ ನೈಸ್‍ರೋಡ್‍ನ ನಂದಿಲಿಂಕ್ಸ್‍ಗೆ ಆಗಮಿಸಿ ಅಭಿಮಾನಿಗಳಿಂದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.
ರಾಜ್ಯಮಾತ್ರವಲ್ಲದೆ ಹೊರರಾಜ್ಯದಿಂದಲೂ ಯಶ್ ಅಭಿಮಾನಿಗಳು ನಂದಿಲಿಂಕ್ಸ್ ಗ್ರೌಂಡ್‍ಗೆ ಜಮಾಯಿಸಿದ್ದು ಯಶ್‍ಗೆ ಹುಟ್ಟುಹಬ್ಬದ ಶುಭಾಶಯಕೋರಿದ್ದಾರೆ . ಇನ್ನು 5000 ಕೆ.ಜಿ ಕೇಕ್ ಕಟ್ ಮಾಡೋ ಮೂಲಕ ಯಶ್ ಇತಿಹಾಸ ಬರೆದಿದ್ದು.. ಯಾರಿಗೂ ಸಿಕ್ಕದ ಲಕ್ ಯಶ್‍ಗೆ ಸಿಕ್ಕಾಂತಾಗಿದೆ. ಮಾತ್ರವಲ್ಲ ಯಶ್ ಬರ್ತ್‍ಡೇ ಪ್ರಯುಕ್ತ ಇದೇ ಮೊದಲ ಬಾರಿ 216 ಅಡಿ ಎತ್ತರದ ಕಟೌಟ್ ಹಾಕಲಾಗಿದ್ದು ಇದು ವಿಶ್ವ ದಾಖಲೆಯನ್ನು ನಿರ್ಮಿಸಿದೆ.. ಅಂದಹಾಗೆ ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ನಿಟ್ಟಿನಲ್ಲಿ ಕೆ.ಜಿ.ಎಫ್ -2 ಲುಕ್ ಬಿಡುಗಡೆಗೊಂಡಿದ್ದು ಯಶ್ ಡೈಲಾಗ್ ಹೊಡಿಯೋದರ ಮೂಲಕ ಮತ್ತೆ ಸೌಂಡ್ ಮಾಡಿದ್ದಾರೆ.