ಖಾರ್ಕಿವ್: ಉಕ್ರೇನ್ ಮೇಲೆ ರಷ್ಯಾ ಸವಾರಿ ಮುಂದುವರಿದಿದೆ. ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಷ್ಯಾ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ.
ಉಕ್ರೇನ್‌ನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ನವೀನ್ ಎಂಬ ವಿದ್ಯಾರ್ಥಿ ಬಲಿಯಾಗಿದ್ದಾನೆ ಎನ್ನಲಾಗಿದೆ.
ರಷ್ಯಾ ಸೇನೆ ನಿರಂತರ ಶೆಲ್ ದಾಳಿ ನಡೆಸುತ್ತಿದ್ದು ಇಂದು ಬೆಳಿಗ್ಗೆ ನಡೆದ ದಾಳಿಯಲ್ಲಿ ಖಾರ್ಕಿವ್‌ನ ಕಟ್ಟಡವೊಂದು ಧ್ವಂಸವಾಗಿದೆ. ಆ ಕಟ್ಟಡದಲ್ಲಿ ಮೆಡಿಕಲ್ ವಿದ್ಯಾರ್ಥಿ ನವೀನ್ ದುರ್ಮರಣ ಹೊಂದಿದ್ದಾನೆ.
ಈ ಕುರಿತು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ನವೀನ್ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದೆ.