ನವದೆಹಲಿ, ಸೆಪ್ಟೆಂಬರ್ 3:ಮಿಥಾಲಿ, ಭಾರತದ ಮಹಿಳಾ ಟಿ20 ತಂಡವನ್ನು ಮುನ್ನಡೆಸಿದ್ದ ಮಾಜಿ ನಾಯಕಿ..ಇಂದು ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದು ಬಿಸಿಸಿಐ ಖಾತರಿಪಡಿಸಿದೆ.
ಭಾರತದ ಮಹಿಳಾ ಏಕದಿನ ತಂಡಕ್ಕೆ ನಾಯಕಿಯಾಗಿ ಮುಂದುವರೆಯಲಿರುವ ಮಿಥಾಲಿ ರಾಜ್, ಈ ವರ್ಷ ಮಾರ್ಚ್‌ನಲ್ಲಿ ಭಾರತದ ಗುವಾಹಟಿಯಲ್ಲಿ ನಡೆದಿದ್ದ, ಇಂಗ್ಲೆಂಡ್ ವಿರುದ್ಧದ ಅಂತಾರಾಷ್ಟ್ರೀಯ ಟಿ20ಯಲ್ಲಿ ಕಡೇಯಸಾರಿ ಪಂದ್ಯವನ್ನಾಡಿದ್ದರು.
ಮಿಥಾಲಿ ರಾಜ್ ಒಟ್ಟು 32 ಟಿ20ಐ ಪಂದ್ಯಗಳಲ್ಲಿ ಭಾರತದ ಮಾಹಿಳಾ ತಂಡವನ್ನು ಮುನ್ನಡೆಸಿದ್ದರು. ಇದರಲ್ಲಿ ಶ್ರೀಲಂಕಾದಲ್ಲಿ 2012ರಲ್ಲಿ ನಡೆದಿದ್ದ, ಬಾಂಗ್ಲಾದೇಶದಲ್ಲಿ 2014ರಲ್ಲಿ ನಡೆದಿದ್ದ, 2016ರಲ್ಲಿ ಭಾರತದಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ಪಂದ್ಯಗಳೂ ಸೇರಿವೆ.