ಹುಬ್ಬಳ್ಳಿ: ಮಾತೃಭಾಷೆಗಳೇ ಸಾರ್ವಭೌಮ. ಎಲ್ಲರೂ ಇದನ್ನು ಮನಗಂಡು ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಅಜಯ ದೇವಗನ್ ಅವರ ಟ್ವೀಟ್ಗೆ ಸುದೀಪ್ ಅವರು ಪ್ರತಿಯಾಗಿ ಟ್ವೀಟ್ ಮಾಡಿರುವುದು ಸರಿ ಇದೆ ಎಂದರು.
ನಮ್ಮ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾದ ಮೇಲೆ ಆ ರಾಜ್ಯ ಗಳಲ್ಲಿ ಮಾತೃಭಾಷೆಗಳಿಗೆ ಪ್ರಾಧ್ಯಾನ್ಯತೆ ಇದೆ. ಅದೇ ಸಾರ್ವಭೌಮ. ಇದನ್ನು ಎಲ್ಲರೂ ಮನಗಂಡು ಗೌರವಿಸಬೇಕು ಎಂದು ಸಿಎಂ ಹೇಳಿದರು.