ಬೆಂಗಳೂರು: ಹಿರಿಯ ರಾಜಕಾರಣಿ, ಮಾಜಿ ಸಚಿವ ಟಿ. ಜಾನ್ ವಿಧಿವಶರಾಗಿದ್ದಾರೆ. 92 ವರ್ಷ ವಯಸ್ಸಿನ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾದರು.
ಕೇರಳದ ಮೂಲವರಾದ ಟಿ.ಜಾನ್ ಅವರು ಹಲವರು ದಶಕಗಳಿಂದ ಕೊಡಗಿಗೆ ಬಂದು ಉದ್ಯಮದಲ್ಲಿ ತೊಡಗಿಕೊಂಡಿದ್ದರು. ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಯಶಸ್ಸು ಗಳಿಸಿದ್ದರು.
ಎಸ್.ಎಂ.ಕೃಷ್ಣಾ ಅವರು ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಟಿ.ಜಾನ್ ಅವರು ಸಚಿವರಾಗಿದ್ದರು.
ಟಿ.ಜಾನ್ ನಿಧನಕ್ಕೆ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.