ನಟ ಹಾಗೂ ನಿರ್ದೇಶಕನಾಗಿರುವ ರಿಷಭ್ ಶೆಟ್ಟಿ ಎಲ್ಲರಂತಲ್ಲ..ಒಂದಿಲ್ಲೊಂದು ಹೊಸ ಹಾಗೂ ವಿಭಿನ್ನ ಬಗೆಯ ಪ್ರಯತ್ನಗಳ ಮೂಲಕವೇ ಜನಮನ್ನಣೆ ಗಳಿಸಿಕೊಂಡವರು..ಸದ್ಯ ಚಿತ್ರರಂಗದ ಹೊರತಾಗಿಯೂ ಹೊಸದೊಂದು ಪ್ರಯೋಗವನ್ನು ಮಾಡಿದ್ದಾರೆ ರಿಷಭ್..ಯಸ್..ರಿಷಭ್ ಹಾಗೂ ಅವರ ಪತ್ನಿ ಪ್ರಗತಿ ತಮ್ಮ ಮುದ್ದಾದ ಮಗುವನ್ನು ಕೊನೆಗೂ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ..ಮಗನಿಗೆ ರಣ್ ವಿತ್ ಶೆಟ್ಟಿ ಎಂದು ನಾಮಕರಣವನ್ನು ಮಾಡಿದ್ದು ವಿಭಿನ್ನ ಭಂಗಿಯ ಫೋಟೋಗಳನ್ನೂ ತೆಗೆಸಿಕೊಂಡಿದ್ದಾರೆ..
ಗಮನಿಸಬೇಕಿರುವ ಅಂಶವೇನು ಗೊತ್ತಾ..? ಸಾಮಾನ್ಯವಾಗಿ ರಿಷಭ್ ಮಗನನ್ನು ಜನತೆಗೆ ಪರಿಚಯಿಸಿಲ್ಲ. ಬದಲಾಗಿ ಟೀಸರ್ ಮೂಲಕ ಜೂನಿಯರ್ ಡಿಟೆಕ್ವಿವ್ ದಿವಾಕರ್ ಲಾಂಚ್ ಆಗಿದ್ದಾರೆ.
ಈಗಲೇ ಸಿನಿಮಾ ಕ್ಲಾಪ್ ಬೋಡ್ಸ್ ಹಿಡಿದು, ರಾಜ್ ಕುಮಾರ್ ಫೋಟೋ ಮುಟ್ಟಿ, ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕ ನೋಡುತ್ತಾ, ಕ್ಯಾಮರಾಗಳ ಜೊತೆ ರಣ್ ವಿತ್ ಶೆಟ್ಟಿ ಬೆಳೆಯುತ್ತಿದ್ದಾರೆ.ಈ ಟೀಸರ್ ಸದ್ಯ ರಿಷಭ್ ರವರ ಯೂಟ್ಯೂಬ್ ಪೇಜ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.