ಚೆನ್ನೈ: ತಮಿಳು ನಟ ಧನುಶ್ ಹಾಗೂ ರಜನೀಕಾಂತ್ರ ಪುತ್ರಿ ಐಶ್ವರ್ಯಾ ದಾಂಪತ್ಯ ಅಂತ್ಯಗೊಂಡಿದೆ. ಈ ದಂಪತಿಯ ವಿಚ್ಛೇದನ ಅರ್ಜಿಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಅನುಮೋದನೆ ಸಿಕ್ಕಿದೆ.
2004 ರಲ್ಲಿ ಧನುಶ್ ಮತ್ತು ಐಶ್ವರ್ಯಾ ಅವರು ಪ್ರೀತಿಸಿ ವಿವಾಹವಾಗಿದ್ದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸುಮಾರು ಎರಡು ವರ್ಷದ ಹಿಂದೆಯೇ ಈ ಜೋಡಿ ತಾವು ದೂರ ಇದ್ದುದಾಗಿ ಈ ದಂಪತಿ ಹೇಳಿಕೊಂಡಿದ್ದು, ಈ ಬೆಳವಣಿಗೆಯನ್ನೇ ಮುಂದಿಟ್ಟು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಬುಧವಾರ ಧನುಶ್ ಹಾಗೂ ಐಶ್ವರ್ಯಾ ವಿಚ್ಛೇದನಕ್ಕೆ ಮಂಜೂರಾತಿ ನೀಡಿ ಆದೇಶಿಸಿದೆ. ಈ ಮೂಲಕ 20 ವರ್ಷಗಳ ಅವರ ದಾಂಪತ್ಯ ಜೀವನ ಅಂತ್ಯವಾಗಿದೆ.