ದೆಹಲಿ: ಕೊರೋನಾ ವೈರಾಣು ದೇಶಾದ್ಯಂತ ಇನ್ನೂ ಮರಣ ಮೃದಂಗ ಭಾರಿಸುತ್ತಿದೆ. ಆದರೆ ಸೋಂಕಿನ ವೇಗದ ಪ್ರಮಾಣ ತಗ್ಗಿದೆ. ವಿವಿಧ ರಾಜ್ಯಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆವರೆಗೆ 24,354 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,37,91,061ಕ್ಕೆ ತಲುಪಿದೆ.
ಇದೇ ವೇಳೆ ಒಂದೇ ದಿನದಲ್ಲಿ 234 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.