ಬೆಂಗಳೂರು, ಸೆ19: 2019ನೇ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಣ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದು ಮೊದಲ ಬಾರಿಗೆ ಸಂಸದರಾದ ತೇಜಸ್ವಿ ಸೂರ್ಯ ಸದ್ಯ ಕಚೇರಿ ಆರಂಭಿಸುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅವರ ಕಚೇರಿಗೂ, ಜನರ ಆಕ್ರೋಶಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂತೀರಾ..?..ಹೌದು..ದಿ.ಅನಂತ್ ಕುಮಾರ್ ಬಳಕೆ ಮಾಡುತ್ತಿದ್ದ ಕಚೇರಿಯನ್ನು ಬಳಸಲು ನಿರಾಕರಿಸಿದ್ದ ಈ ಯುವ ಸಂಸದರು, 168ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಪಟ್ಟಾಭಿರಾಮನರಗದ ಗ್ರಂಥಾಲಯವಿದ್ದ ಜಾಗದಲ್ಲಿ ತಮ್ಮ ನೂತನ ಕಚೇರಿ ತೆರೆಯುವ ಯೋಜನೆ ಹಾಕಿದ್ದರು. ಇದಕ್ಕಾಗಿ ಬಿಬಿಎಂಪಿ ಮೊರೆ ಹೋಗಿದ್ದು, ಬಿಬಿಎಂಪಿ ಖುದ್ದು ಅವರಿಗೆ ಕಚೇರಿ ಆರಂಭಿಸಲು ಸ್ಥಳ ತೆರವುಗೊಳಿಸುವಂತೆ ಆದೇಶವನ್ನ ನೀಡಿತ್ತು.
ಇದರಿಂದ ಬೇಸರಗೊಂಡ ಅನೇಕರು, ಜಯನಗರ ವ್ಯಾಪ್ತಿಯಲ್ಲಿ ಬರುವುದು ಕೆಲವೇ ಕೆಲವು ಗ್ರಂಥಾಲಯಗಳು..ಬಡ ಮಕ್ಕಳಿಗೆ ಸಹಕಾರಿಯಾಗುವ ಈ ಗ್ರಂಥಾಲಯಗಳ ಆವರಣವನ್ನು ಹೀಗೆ ಸಂಸದರ ಬಳಕೆಗೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ..ಅಲ್ಲದೆ ಈ ಭಾಗದಲ್ಲಿ ಮೊದಲೇ ಪಾರ್ಕಿಂಗ್ ಸಮಸ್ಯೆಯೂ ಇದ್ದು, ಸಂಸದರ ಕಚೇರಿಯಾದ ಬಳಿಕ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ ಎಂಬುದಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.