ಕನ್ನಡ ಮಾತ್ರವಲ್ಲದೆ ಮಲಯಾಳಂ ಚಿತ್ರರಂಗದಲ್ಲೂ ಹೆಸರು ಮಾಡಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಚರವರ ತಂದೆ ಉದ್ದಪಂಡ ಪೂಣಚ್ಚ ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. 68 ವರ್ಷ ವಯಸ್ಸಿನ ಹರ್ಷಿತಾರ ತಂದೆ ಕಳೆದ ಕೆಲ ತಿಂಗಳಿಂದ ಸಣ್ಣ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದು ಸರ್ಜರಿಯನ್ನೂ ಮಾಡಿಸಿಕೊಂಡಿದ್ದರು. ತಿಂಗಳಿನಿಂದೀಚೆಗೆ ತುಂಬಾನೇ ವೀಕ್ ಆಗಿದ್ದ ಅವರು ಬರೀ ದ್ರವ ರೂಪದ ಆಹಾರವನ್ನೇ ಸೇವನೆ ಮಾಡುವ ಸ್ಥಿತಿಗೆ ತಲುಪಿದ್ದರು. ಆರೋಗ್ಯ ಚೇತರಿಸಿಕೊಳ್ಳದ ಕಾರಣ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಅವರ ಸ್ವಗ್ರಾಮ ಕೊಡಗಿನ ವಿರಾಜಪೇಟೆಯ ಕುಮ್ಮತೋಡ್ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಸಿನಿ ಗಣ್ಯರು ಹರ್ಷಿಕಾಗೆ ಸಾಂತ್ವನ ಹೇಳಿದ್ದಾರೆ