ವಿಶಾಖಪಟ್ಟಣ, ಅ.5: ಟೀಮ್ ಇಂಡಿಯಾ ಆಟಗಾರರಲ್ಲಿ ಎಂಎಸ್ ಧೋನಿ, ಹರ್ಭಜನ್ ಸಿಂಗ್, ಸುರೇಶ್ ರೈನಾ, ಹನುಮ ವಿಹಾರಿ ಹೆಣ್ಣು ಮಗುವಿಗೆ ಅಪ್ಪನಾದ ಸಂಭ್ರಮ ಆಚರಿಸಿದ್ದರು. ಈಗ ಈ ಖುಷಿ ರಹಾನೆಯದ್ದಾಗಿದೆ. ಹೌದು, ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅಪ್ಪನಾದ ಖುಷಿಯಲ್ಲಿದ್ದಾರೆ. ರಹಾನೆ ಪತ್ನಿ ರಾಧಿಕಾ ಧೋಪಾವ್ಕರ್ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅಜಿಂಕ್ಯ ರಹಾನೆ 2014ರಲ್ಲಿ ತನ್ನ ಬಾಲ್ಯದ ಗೆಳತಿ ರಾಧಿಕಾ ಅವರನ್ನು ವರಿಸಿದ್ದರು. ಶಾಲಾದಿನಗಳಲ್ಲಿದ್ದಾಗ ಮೊದಲು ಭೇಟಿಯಾಗಿದ್ದ ರಹಾನೆ-ರಾಧಿಕ ಇಬ್ಬರ ಸ್ನೇಹ ಗಾಢವಾಗಿತ್ತು. ಬೆಳೆಯುತ್ತಲೇ ಈ ಸ್ನೇಹ, ಪ್ರೀತಿಯತ್ತ ವಾಲಿತ್ತು. ಅನಂತರ ಇಬ್ಬರ ಹೆತ್ತವರ ಒಪ್ಪಿಗೆ ಮೇರೆಗೆ ಹರಾನೆ-ರಾಧಿಕ ಜಂಟಿ ಜೀವನಕ್ಕೆ ಕಾಲಿರಿಸಿದ್ದರು.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಹಾನೆಗೆ ಪಾಲಿಗೆ ಈ ದಿನ ವಿಶೇಷವೆನಿಸಿದೆ. ಸದ್ಯ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡುತ್ತಿರುವ ರಹಾನೆ, ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್ ಬಾರಿಸಿದ್ದರು.