ಆಯಾ ಸಮುದಾಯದವರು ತಮ್ಮ ತಮ್ಮ ಸಮುದಾಯವನ್ನು ಬೆಳೆಸಲು –ಉಳಿಸಲು ಹಾಗೂ ಹಲವು ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳನ್ನು ಹುಡುಕಲು ಸಮಿತಿಯನ್ನು ನಿರ್ಮಿಸಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋದರ ಮೂಲಕ ಕಾರ್ಯಪ್ರವೃತರಾಗುತ್ತಾರೆ.ಅದರಂತೆ ಬಂಟ ಸಂಘ ಅನ್ನೋ ಸಮುದಾಯ ತುಳುನಾಡಿನಲ್ಲಿ ಖ್ಯಾತಿ ಪಡೆಯುವುದಲ್ಲದೆ . ಅರಬ್ ನೆಲದಲ್ಲೂ ಬಂಟರ ಸೊಗಡನ್ನು ಪಸರಿಸಿದೆ.
ಇತ್ತೀಚೆಗಷ್ಟೆ ಬಹರೈನ್ ನೆಲದಲ್ಲಿ 2020ರ ‘ಬಹರೈನ್ ಬಂಟ ಸಮಿತಿ’ ನಿರ್ಮಾಣಗೊಂಡಿದ್ದು ; ಇದರ ಬೆನ್ನಲ್ಲೇ ಸಮಿತಿ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ದುರ್ಗಾಪೂಜೆಯು ನಡೆಯಲಿದೆ . ಈ ಮೂಲಕ ಬಂಟ ಸಮಿತಿಯ ಮೊದಲ ಕಾರ್ಯಕ್ರಮ ಶುರುವಾಗಲಿದೆ . ಇನ್ನು ವೇದಮೂರ್ತಿ ನಯನ ಕೃಷ್ಣ ಭಟ್ ಮತ್ತು ವೇದಮೂರ್ತಿ ಅರುಣ್ ಶಂಕರ್ ಭಟ್ ಪೌರೋಹಿತ್ಯದಲ್ಲಿ ಜನವರಿ 24 ರಂದು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪೂಜೆ ಜರುಗಲಿದ್ದು ; ಮಹಾಪೂಜೆಯ ಬಳಿಕ ಅನ್ನಸಂತರ್ಪಣೆಯೂ ನಡೆಯಲಿದೆ. ಈ ನಿಟ್ಟಿನಲ್ಲಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ್ದು ಇದರ ಮೂಲಕ ಸಮಸ್ತ ಬಂಟ ಸಮುದಾಯಕ್ಕೆ ಕರೆಯೋಲೆಯನ್ನು ನೀಡಿದಂತಾಗಿದೆ.

ಅಂದಹಾಗೆ ಈ ಬಾರಿಯ ಬಹರೈನ್ ಬಂಟ ಸಮಿತಿಯಲ್ಲಿ ಅಧ್ಯಕ್ಷರಾಗಿ ಮೋಹನ್‍ದಾಸ್ ಯೆರುಂಬು, ಉಪಾಧ್ಯಕ್ಷರಾಗಿ ಅನಿಲ್ ನಾೈಕ್ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್ ಶೆಟ್ಟಿ ಮಜ್ಜಾರ್ , ಸಹಾಯಕ ನಿರ್ದೇಶಕನಾಗಿ ರಕ್ಷಣ್ ರೈ, ಖಜಾಂಜಿಯಾಗಿ ರಂಜಿತ್ ಶೆಟ್ಟಿ, ಸಹಾಯಕ ಖಜಾಂಜಿಯಾಗಿ ರಾಹುಲ್ ಶೆಟ್ಟಿ ಕುಡ್ಲ, ಮನೋರಂಜನಾ ಕಾರ್ಯದರ್ಶಿಯಾಗಿ ದಿವ್ಯರಾಜ್ ರೈ ,ಸಹಾಯಕ ಮನೋರಂಜನಾ ನಿರ್ದೇಶಕಿಯಾಗಿ ಅರ್ಚನಾ ಸಂದೀಪ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ, ಸಹಾಯಕ ಕ್ರೀಡಾ ಕಾರ್ಯದರ್ಶಿಯಾಗಿ ಸಂದೀಪ್ ಅಡಪ್ಪ , ಪಿಆರ್‍ಓ ಸ್ಥಾನಕ್ಕೆ ವಿಕ್ರಮ್ ಶೆಟ್ಟಿ ಹಾಗೂ ಗುರುರಾಜ್ ನಾೈಕ್ ಆಯ್ಕೆಯಾಗಿದ್ದಾರೆ .
