ಬಿಗ್ ಬಾಸ್ ಮನೆಯಲ್ಲಿ ಒಂದಿಲ್ಲೊಂದು ರಾದ್ಧಾಂತಗಳು, ರಗಳು, ತಲೆ ಹರಟೆ ಮಾಡುವ ಮಂದಿ ಇಲ್ಲವಾದರೆ ನೋಡುಗರಿಗೆ ಅದ್ಯಾಕೋ ಬೇಜಾರು ಶುರುವಾಗಿಬಿಡುತ್ತೆ..ಇದರ ಎಫೆಕ್ಟ್, ವಾರದ ಟಿಆರ್ ಪಿಯ ಮೇಲೂ ಬೀರೋದ್ರಿಂದ ಈ ರಿಯಾಲಿಟಿ ಶೋವನ್ನು ಪ್ರಸಾರ ಮಾಡುವ ವಾಹಿನಿ ಒಂದಿಲ್ಲೊಂದು ಕಸರತ್ತನ್ನ ಮಾಡಿ ಜನರ ಗಮನಸೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತದೆ.
ಕಳೆದೊಂದು ವಾರದಿಂದ ಬಿಕೋ ಎನ್ನುತ್ತಿದ್ದ ಮನೆಯನ್ನು ಆಕ್ಟೀವ್ ಮಾಡುವ ಸಲುವಾಗಿ ಸಂಗೀತ ಮಾಂತ್ರಿಕ ಗುರುಕಿರಣ್ ಬಿಗ್ ಬಾಸ್ ಮನೆಗೆ ವಿಸಿಟ್ ಕೊಟ್ಟು ಎಲ್ಲರನ್ನೂ ರಂಜಿಸಿದ್ರು. ನಿನ್ನೆಯಷ್ಟೇ ಜಾದುಗಾರ ಕುದ್ರೋಳಿ ಗಣೇಶ್ ಸಹ ಬಿಗ್ ಬಾಸ್ ಮನೆಗೆ ಬಂದು ಮ್ಯಾಜಿಕ್ ಮಾಡ್ತಾ ಸ್ಪರ್ಧಿಗಳ ಜೊತೆ ಕಾಲ ಕಳೆದಿದ್ರು..
ನಿನ್ನೆಯ ಕಾರ್ಯಕ್ರಮ ಮುಗಿಯೋ ವೇಳೆಗೆ ಗಣೇಶ್ ಜಾದೂ ಮಾಡ್ತಾ ಸ್ಪರ್ಧಿಗಳನ್ನು ಗಾರ್ಡನ್ ಏರಿಯಾಗೆ ಕರೆದೊಯ್ದು, ಮಂತ್ರ ಹೇಳಿ ನಾಲ್ಕನೇ ವಾರ ಎಲಿಮಿನೇಟ್ ಆಗಿದ್ದ ಸ್ಪರ್ಧಿ, ನಟಿ ಚೈತ್ರಾ ಕೊಟ್ಟೂರ್ ಅವರನ್ನು ಪ್ರತ್ಯಕ್ಷ ಮಾಡಿಸಿದ್ದಾರೆ..ಚೈತ್ರಾರನ್ನ ಮನೆಯಲ್ಲಿ ಮತ್ತೆ ಕಂಡೊಡನೆಯೇ ಉಳಿದ ಸ್ಪರ್ಧಿಗಳಿಗೆ ಮತ್ತೆ ತಲೆ ನೋವು ಶುರುವಾಗಿದೆ..
ಹೇಳೀ ಕೇಳಿ ಕಿರಿಕಿರಿ ಮಾಡುತ್ತಲೇ ಇದ್ದಷ್ಟೂ ದಿನ ಎಲ್ಲರ ಸಿಟ್ಟಿಗೆ ಕಾರಣವಾಗಿದ್ದ ಚೈತ್ರಾ ಕೊಟ್ಟೂರ್, ಮತ್ತೆ ಮನೆಯಲ್ಲಿ ಕಾಣಿಸಿಕೊಂಡಿದ್ಯಾಕೆ..? ಅವರು ಅಂದು ಹೇಳಿದಂತೆ ಮನೆಯಲ್ಲಿ ಬಿಟ್ಟುಹೋಗಿರುವ ಅರ್ಧ ಸೀರೆಯನ್ನು ತೆಗೆದುಕೊಂಡು ಹೋಗೋದಕ್ಕಾದರೆ ಎಲ್ಲವೂ ಚೆನ್ನ..ಅದನ್ನು ಬಿಟ್ಟು ಮತ್ತೆ ಮನೆಗೆ ರಿ ಎಂಟ್ರಿ ಕೊಡೋದಕ್ಕಾದರೆ ಮುಂದಿನ ದಿನಗಳಲ್ಲಿ ಮನೆ ಅದೆಷ್ಟು ಭಾಗಗಳಾಗುತ್ತವೋ ದೇವರೇ ಬಲ್ಲ.. �<��+