ಮೈಸೂರು,ಡಿ.04: ವಿಧಾನಸಭಾ 15 ಕ್ಷೇತ್ರಗಳ ಉಪಚುಣಾವಣೆಗಿನ್ನು ಗಂಟೆಗಳಷ್ಟೇ ಬಾಕಿ ಉಳಿದಿದ್ದು, ಹುಣಸೂರು ಕ್ಷೇತ್ರದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಈ ನಡುವೆ ಸಮಯಕ್ಕೆ ಸರಿಯಾಗಿ ಹಾಜರಾಗದ ಅಧಿಕಾರಿಗಳಿಗೆ ಚುನಾವಣಾಧಿಕಾರಿ ಪೂವಿತಾ ಅವರು ತರಾಟೆ ತೆಗೆದುಕೊಂಡ ಘಟನೆ ನಡೆಯಿತು.
ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಹುಣಸೂರು ಕ್ಷೇತ್ರದ ಮಸ್ಟರಿಂಗ್ ಕಾರ್ಯ ನಡೆಯುತ್ತಿದ್ದು, ಸಮಯಕ್ಕೆ ಸರಿಯಾಗಿ ಆಗಮಿಸದ ಸಿಬ್ಬಂದಿಗಳ ವಿರುದ್ದ ಚುನಾವಣಾಧಿಕಾರಿ ಪೂವಿತಾ ಗರಂ ಆಗಿದ್ದರು. ಸಮಯಕ್ಕೆ ಸರಿಯಾಗಿ ಬರಲಾಗದಿದ್ದರೆ ಮನೆಲಿರೊದಕ್ಕೆ ಹೇಳಿ, ಸಸ್ಪೆನ್ಷನ್ ಅರ್ಡರ್ ಕಳಿಸ್ತೀವಿ ಎಂದು ಕಿಡಿಕಾರಿದರು.