ಭಾರತ ತಂಡ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಹಾಗೂ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಆಫ್ರಿದಿ ನಡುವಿನ ಟ್ವೀಟ್ ವಾರ್ ಮತ್ತೆ ಶುರುವಾಗಿದೆ. ಕಾಶ್ಮೀರ ವಿಚಾರದ ಬಗ್ಗೆ ಟ್ವೀಟ್ ಮಾಡಿದ್ದ ಅಫ್ರಿದಿಗೆ ಟ್ವೀಟ್ ಮೂಲಕವೇ ಗಂಭೀರ್ ಸಿಕ್ಸರ್ ಬಾರಿಸಿದ್ದಾರೆ.
ಶಾಹಿದ್ ಅಫ್ರಿದಿ ಬುಧವಾರ ಟ್ವಿಟ್ಟರ್ನಲ್ಲಿ”ದೇಶದ ಜನತೆಯಲ್ಲ ಪ್ರಧಾನ ಮಂತ್ರಿ ‘ಕಾಶ್ಮೀರ್ ಅವರ್’ ಕರೆಗೆ ಪ್ರತಿಕ್ರಿಯಿಸಬೇಕು. ನಾನು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮಝರ್ ಇ ಕ್ವೈದ್ಗೆ ಬರುತ್ತೇನೆ. ನಮ್ಮ ಕಾಶ್ಮೀರಿ ಸಹೋದರರೊಂದಿಗೆ ಒಗ್ಗಟ್ಟನ್ನು ತೋರಿಸಲು ನನ್ನ ಜೊತೆ ನೀವು ಸೇರಿಕೊಳ್ಳಿ. ಶೀಘ್ರದಲ್ಲೇ LOC (ಲೈನ್ ಆಫ್ ಕಂಟ್ರೋಲ್)ಗೂ ಭೇಟಿ ನೀಡಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ನಿಂದ ಕೋಪಗೊಂಡಿರುವ ಗಂಭೀರ್ ಅವರು ಅಫ್ರಿದಿ ಫೋಟೊ ಟ್ವೀಟ್ ಮಾಡಿ, ಈ ಚಿತ್ರದಲ್ಲಿ ಶಾಹೀದ್ ಅಫ್ರಿದಿ ಮುಜುಗರಕ್ಕೊಳಗಾಗುವುದಕ್ಕೆ ಏನು ಮಾಡಬೇಕು ಎಂದು ಶಾಹಿದ್ ಆಫ್ರಿದಿಯನ್ನೇ ಕೇಳುತ್ತಿದ್ದಾನೆ. ಇದರಿಂದ ಶಾಹಿದ್ ಆಫ್ರಿದಿ ಪ್ರಬುದ್ಧನಾಗಲು ನಿರಾಕರಿಸಿದ್ದಾನೆ ಎಂಬುದರ ಬಗ್ಗೆ ನನಗಿದ್ದ ಅನುಮಾನಗಳು ಖಚಿತವಾಗಿವೆ. ಆತ ಪ್ರಬುದ್ಧನಾಗಲು ಆನ್ಲೈನ್ ಶಿಶುವಿಹಾರದ ಟ್ಯುಟೋರಿಯಲ್ಗೆ ಸೇರಿಕೊಳ್ಳುವಂತೆ ಆದೇಶಿಸುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅಫ್ರಿದಿ ಅಲ್ಲದೆ, ಜಾವೇದ್ ಮಿಯಾಂದಾದ್ ಜೊತೆಗೆ ಗಡಿ ನಿಯಂತ್ರಣ ರೇಖೆ(LOC)ಗೆ ಇತರೆ ಕ್ರೀಡಾಪಟುಗಳೊಂದಿಗೆ ಭೇಟಿ ನೀಡಿ ಶಾಂತಿ ಬಾವುಟ ಹಾರಿಸುವುದಾಗಿ ತಿಳಿಸಿದ್ದಾರೆ.