ದೆಹಲಿ: ಕೊರೋನಾ ವೈರಾಣು ದೇಶಾದ್ಯಂತ ಇನ್ನೂ ಮರಣ ಮೃದಂಗ ಭಾರಿಸುತ್ತಿದೆ. ಆದರೆ ಸೋಂಕಿನ ವೇಗದ ಪ್ರಮಾಣ ತಗ್ಗಿದೆ. ವಿವಿಧ ರಾಜ್ಯಗಳಲ್ಲಿ ಬುಧವಾರ ಬೆಳಿಗ್ಗೆಯಿಂದ ಗುರುವಾರ ಬೆಳಿಗ್ಗೆವರೆಗೆ 9,765 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ನಡುವೆ, ದೇಶದಲ್ಲಿನ ಪ್ರಸ್ತುತ ದೈನಂದಿನ ಸೋಂಕು ಪ್ರಮಾಣ ಶೇ.0.89ರಷ್ಟಿದೆ.
ಇದೇ ವೇಳೆ ಒಂದೇ ದಿನದಲ್ಲಿ 477 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.