ದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗಿದ್ದು, ಇಂದು ಬೆಳಿಗ್ಗೆ ಅನಾವರಣಗೊಂಡ ಅಂಕಿ-ಅಂಶಗಳು ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಇಂದು ಬೆಳಿಗ್ಗೆವರೆಗೆ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 1,41,986 ಕೊರೊನಾ ಕೇಸ್ಗಳು ದಾಖಲಾಗಿದ್ದು, ಭಾರತದಲ್ಲಿ ದೈನಿಕ ಪಾಸಿಟಿವಿಟಿ ದರ ಶೇ.9.28ಕ್ಕೆ ಏರಿಕೆಯಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ.
ಹೆಚ್ಚು ಸೋಂಕುಗಳು ಪತ್ತೆಯಾಗುವ ರಾಜ್ಯಗಳ ಪಟ್ಟಿ ಹೀಗಿದೆ:
- ಮಹಾರಾಷ್ಟ್ರ 40,925 ಹೊಸ ಪ್ರಕರಣಗಳು
- ಪಶ್ಚಿಮಬಂಗಾಳ 18,213 ಹೊಸ ಪ್ರಕರಣಗಳು
- ದೆಹಲಿ 17,335 ಹೊಸ ಪ್ರಕರಣಗಳು
- ತಮಿಳುನಾಡು 8,981 ಹೊಸ ಪ್ರಕರಣಗಳು
- ಕರ್ನಾಟಕ 8,449 ಹೊಸ ಪ್ರಕರಣಗಳು