ಬೆಂಗಳೂರು, ಡಿ.4: ಕಳೆದ ಕೆಲವು ದಿನಗಳಿಂದ ಉಪಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇಂದು ತೀವ್ರ ಅಸ್ವಸ್ಥರಾಗಿದ್ದರು. ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಜ್ವರ, ಕೆಮ್ಮಿನಿಂದ ಬಳಲುತ್ತಿರುವ ಅವರು ಬುಧವಾರ ಬೆಳಗ್ಗೆ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚುನಾವಣಾ ಪ್ರಚಾರದ ನಿಮಿತ್ತ ದಿನಕ್ಕೆ ಎರಡು ಕ್ಷೇತ್ರಗಳಂತೆ ಪ್ರಚಾರ ಮಾಡಿ ಚುನಾವಣಾ ಒತ್ತಡದಿಂದಾಗಿ ಹಾಗೂ ಹವಾಮಾನ ವೈಪರಿತ್ಯ ಅವರನ್ನು ಕಂಗಾಲಾಗಿಸಿದೆ. ಇದರಿಂದಾಗಿ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಕೆಮ್ಮು ಕೂಡ ಇದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಹೃದಯ ಸಂಬಂಧಿ ತೊಂದರೆಯಿಂದಲೂ ಹೆಚ್ ಡಿಕೆ ಬಳಲುತ್ತಿದ್ದರಿಂದ ಪ್ರಚಾರದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪಟಾಕಿ ಹೊಡೆಯಬೇಡಿ ಎಂದು ಮನವಿಯನ್ನೂ ಕೂಡ ಮಾಡಿದ್ದರು.
ಒಟ್ಟು 15 ಕ್ಷೇತ್ರಗಳಿಗೆ ಡಿಸೆಂಬರ್
5 ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಹೊರಬೀಳಲಿದೆ. ಹಿರೆಕೆರೂರು ಹಾಗೂ
ಹೊಸಕೋಟೆ ಹೊರತುಪಡಿಸಿ ಉಳಿದೆಲ್ಲಾ ಕಡೆ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆದು ಕುಮಾರಸ್ವಾಮಿ ವಾಪಸಾಗಿದ್ದಾರೆ.