ಮೇಷ:- ಪ್ರಮುಖ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಜೀವನ ಮತ್ತು ವೃತ್ತಿ ಬದುಕಿನಲ್ಲಿ ಬದಲಾವಣೆ ಕಂಡುಬರುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದರಿಂದ ಹಣಕಾಸಿನ ಚಿಂತೆ ಇರುವುದಿಲ್ಲ.
ವೃಷಭ:- ಯಾರೊಂದಿಗೂ ಅಸಮಾಧಾನ ವ್ಯಕ್ತಪಡಿಸುವುದು ಒಳ್ಳೆಯದಲ್ಲ. ಇನ್ನೊಬ್ಬರ ವ್ಯಾಜ್ಯದಲ್ಲಿ ಮೂಗು ತೂರಿಸದಿರಿ. ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ಪ್ರಗತಿ ಮಾನಸಿಕ ನೆಮ್ಮದಿಯನ್ನು ತಂದು ಕೊಡುವುದು.
ಮಿಥುನ:- ಸರಿ ಎನಿಸಿದ್ದನ್ನು ಧೈರ್ಯವಾಗಿ ಎಲ್ಲರ ಮುಂದೆ ಮಾತನಾಡುವಿರಿ. ಇದರಿಂದ ವಿರೋಧಿಗಳು ಹಿಮ್ಮೆಟ್ಟುವರು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಶಿರೋವೇದನೆ ಕಾಡುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆ ಇರುವುದಿಲ್ಲ.
ಕಟಕ:- ವೃತ್ತಿ ಪರರಿಗೆ ವಿಶ್ರಾಂತಿ ಲಭಿಸುತ್ತದೆ. ಬಂಧುಮಿತ್ರರಿಂದ ವಿಮರ್ಶೆ, ಟೀಕೆಗಳು ಬರುವ ಸಾಧ್ಯತೆ ಇರುವುದು. ಸಹೋದರನಿಂದ ಸಹಾಯ ದೊರೆಯುವುದು. ದೂರ ಪ್ರವಾಸದ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುವುದು.
ಸಿಂಹ:– ಹಣದ ಹರಿವು ಹೆಚ್ಚಾಗಲಿದೆ. ಆದರೆ ಖರ್ಚು, ವೆಚ್ಚಗಳ ಮೇಲೆ ನಿಗಾ ಇಡುವುದು ಕ್ಷೇಮ. ಕುಟುಂಬದವರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದರಿಂದ ನೀವು ಕಳೆದುಕೊಳ್ಳುವುದು ಏನಿಲ್ಲ. ಇದರಿಂದ ನಿಮಗೆ ಹೆಚ್ಚಿನ ಗೌರವ ಬರುವುದು.
ಕನ್ಯಾ:- ಆಶಾವಾದವೇ ಜೀವನ. ನಿರಾಶಾವಾದವೇ ಮರಣ ಎನ್ನುವಂತೆ ಆಶಾವಾದದಿಂದ ಇರುವ ದಿನ ನಿಮ್ಮ ಎಲ್ಲಾ ಧನಾತ್ಮಕ ಕಾರ್ಯಗಳು ಕೈಗೂಡುವುವು. ಅದರಿಂದ ಹೆಚ್ಚಿನ ಸಂತಸವುಂಟಾಗುವುದು. ದುರ್ಗಾದೇವಿಯ ಸ್ತೋತ್ರ ಪಠಿಸಿ.
ತುಲಾ:- ನೀವು ಹೋಗುತ್ತಿರುವ ದಾರಿ ಸರಿಯಾದುದೆ. ಆದರೆ ನಿಮ್ಮ ಸಂಗಡ ಇತರರನ್ನು ಕರೆದುಕೊಂಡು ಹೋಗಬೇಕೆನ್ನುವ ನಿಮ್ಮ ಜಾಣ್ಮೆ ಮೆಚ್ಚಬೇಕಾದ್ದು. ಈ ಬಗ್ಗೆ ಸಮಾಜದಲ್ಲಿ ಗೌರವಿಸಲ್ಪಡುವಿರಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುವುದು.
ವೃಶ್ಚಿಕ:- ನಿಮ್ಮ ಕಾರ್ಯ ಯೋಜನೆಗಳು ನೀವು ಬಯಸಿದಂತೆ ಆಗುವುದರಿಂದ ವಿರೋಧಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸುವುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಬೆನ್ನು ತಟ್ಟಿ ಹುರಿದುಂಬಿಸುವರು. ಸಕಾಲಕ್ಕೆ ಬರುವ ಹಣಕಾಸಿನಿಂದ ಒಳಿತಾಗುವುದು.
ಧನುಸ್ಸು:– ಧೈರ್ಯವಾಗಿ ಮಾತನಾಡಿ. ನಿಮ್ಮ ನೇರ ನಿಷ್ಠುರ ನುಡಿಯಿಂದಾಗಿ ಕೆಲವೇ ಉತ್ತಮ ಸ್ನೇಹಿತರು ದೊರೆಯುವರು. ಕುಲದೇವರ ಪ್ರಾರ್ಥನೆ ಮಾಡಿ. ಮತ್ತು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬರುವುದು ಒಳ್ಳೆಯದು.
ಮಕರ:– ಪ್ರೇಮಾನುಬಂಧಗಳು ಬದಲಾಗುವ ಸಾಧ್ಯತೆ ಇದೆ. ಗೆಳೆಯ, ಗೆಳತಿಯರು ಎಷ್ಟೇ ವಿಶ್ವಾಸದಲ್ಲಿದ್ದರೂ ಅವರನ್ನು ಒಮ್ಮೆಲೇ ನಂಬಬೇಡಿ. ಇದರಿಂದ ಮೋಸ ಹೋಗುವ ಸಾಧ್ಯತೆ ಇದೆ. ಗುರು ಹಿರಿಯರ ಸಲಹೆ ಸಹಕಾರವನ್ನು ಪಡೆಯಿರಿ.
ಕುಂಭ:– ನೀವು ಸರಿಯಾದ ದಾರಿಯಲ್ಲಿ ಕ್ರಮಿಸುತ್ತಿರುವುದರಿಂದ ನಿಮ್ಮನ್ನು ಕಂಡರೆ ಎಲ್ಲರಿಗೂ ಗೌರವ, ಪ್ರೀತಿ. ಇದನ್ನು ಕಾಪಾಡಿಕೊಂಡು ಹೋಗುವುದು ನಿಮಗೆ ಬಿಟ್ಟಿದ್ದು. ನಿಮ್ಮ ಬುದ್ಧಿವಂತಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗುವುದು.
ಮೀನ:– ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತಗೊಳಿಸುವುದು. ನಿಮ್ಮ ಮನಸ್ಸಿಗೆ ಒಪ್ಪುವಂತಹ ಶುಭ ವಾರ್ತೆ ಕೇಳುವಿರಿ. ಮಕ್ಕಳ ಅಭ್ಯುದಯ ನಿಮಗೆ ಹೊಸ ಹುರುಪನ್ನು ತಂದುಕೊಡುವುದು.