ಮೇಷ : ಈ ದಿನ ಸಂಪತ್ತಿನಲ್ಲಿ ಸ್ಥಿರತೆ ಇಲ್ಲದೆ ಏರುಪೇರಾಗಿರುವುದು, ಚಂಚಲತೆ ಮತ್ತು ಅಲ್ಪ ಬುದ್ಧಿಯಿಂದ ಪರಧನ ನಾಶಕ್ಕೆ ಕಾರಣರಾಗುವ ಸಂಭವ, ಸಹೋದರ ಸುಖ ಹೀನರಾಗಿ ತಂದೆಯಿಂದಲೂ ದೂರವಿರುವ ಸನ್ನಿವೇಷಗಳಿವೆ, ಶ್ರೀ ಕಾರ್ತಿಕೇಯಸ್ವಾಮಿಗಳಿಂದ ಶುಭ.
ವೃಷಭ : ಗೋ ಸಂಪತ್ತುಗಳಲ್ಲಿ ಸಮೃದ್ಧಿ ಇರುವುದು, ದೇವ ಬ್ರಾಹ್ಮನ ಮತ್ತು ಗುರುಗಳನ್ನು ಪೂಜಿಸುವುದರಲ್ಲಿ ಆಸಕ್ತಿಯುಳ್ಳವರಾಗಿರುವಿರಿ, ಈ ದಿನ ಮಾತಾ ಪಿತರಿಗೆ ಹಿತಕರವಾಗಿ ನಡೆಯುಳ್ಳವರಾಗಿದ್ದೀರಿ, ಶ್ರೀ ಲಕ್ಷ್ಮೀಯ ಆರಾಧನೆಗಳಿಂದ ಶುಭ.
ಮಿಥುನ : ಸಹ ವರ್ತಿಗಳಲ್ಲಿ ಅಸಹನೆಯುಳ್ಳವರಾಗಿರುವಿರಿ, ಕೆಟ್ಟ ಮಾತುಗಳಿಂದ ದಿನ ಕುಟುಂಬದ ಸದಸ್ಯರಿಗೆ ಕಿರಿಕಿರಿ ಉಂಟು ಮಾಡುವಿರಿ, ಅನಾರೋಗ್ಯದ ಬಾಧೆಯನ್ನು ಎದುರಿಸಬೇಕಾಗುವುದು, ಲಕ್ಷ್ಮೀನಾರಾಯಣನ ಸೇವೆಗಳಿಂದ ಶುಭ.
ಕಟಕ : ಈ ದಿನ ಮೃಷ್ಟಾನ್ನ ಭೋಜನಗಳಿಂದ ಸಂತೃಷ್ಟಿ ಹೊಂದುವಿರಿ, ಒಳ್ಳೆಯ ವಸ್ತ್ರಾಲಂಕಾರಗಳಿಂದ ಕೂಡಿರುವಿರಿ, ಸ್ತ್ರೀಯರಿಂದ ನಿಮ್ಮ ಕಾರ್ಯ ವೈಕರಿಗೆ ಹೊಗಳಿಕೆ ಸಿಗುವುದು, ಶ್ರೀ ಪಾರ್ವತಿ ದೇವಿಯ ಆರಾಧನೆಗಳಿಂದ ಶುಭ.
ಸಿಂಹ : ಕುಟುಂಬ ಕಾರ್ಯಗಳಲ್ಲಿ ಹಿನ್ನಡೆಯಾಗುವ ಸನ್ನಿವೇಷಗಳು ಬಹು ಖರ್ಚುಗಾರರಾಗಿ ಧನವ್ಯವಹಾರಗಳಲ್ಲಿ ಸಂಚಾಕಾರ ತಂದುಕೊಳ್ಳುವಿರಿ, ಶೀಘ್ರಕೋಪಗಳಿಂದ ಕಾರ್ಯ ಹಾನಿಯಾಗುವುದು, ಶ್ರೀ ರುದ್ರಾರಾಧನೆಗಳಿಂದ ಶುಭ.
ಕನ್ಯಾ : ಬಂಧು ಜನರಲ್ಲಿ ಪ್ರೀತಿ ಪಾತ್ರರಾಗುವಿರಿ, ದೇಶಾಂತರ ಪರ್ಯಟನಾಸಕ್ತರಾಗಿರುವಿರಿ, ಅಭಿವೃದ್ಧಿ ಕಾರ್ಯಗಳಲ್ಲಿ ವಿಶೇಷ ಆಸಕ್ತರಾಗಿರುವಿರಿ, ಶ್ರೀ ಸತ್ಯನಾರಾಯಣ ಸ್ವಾಮಿ ವ್ರತಾದಿಗಳಿಂದ ಶುಭ.
ತುಲಾ: ಕೃಷಿ ಕ್ಷೇತ್ರಗಳ ಒಡೆತನ ಮೆರೆಯುವಿರಿ, ನಿಮ್ಮ ವ್ಯಾಪಾರ ವ್ಯವಹಾರದ ಚಾಕ ಚಕ್ಯತೆಗಳಿಗೆ ಪೂಜ್ಯತೆ ದೊರಕುವುದು, ದೇಹ ಸೌಂದರ್ಯಕ್ಕೆ ವಿಶೇಷ ಪ್ರಾಮುಖ್ಯತೆ ಕೊಡುವಿರಿ, ಶ್ರೀ ಲಕ್ಷ್ಮೀ ಸೇವೆಗಳಿಂದ ಶುಭ.
ವೃಶ್ಚಿಕ : ವಿದ್ವಾಂಸರ ಮತ್ತು ಸಜ್ಜನರ ದ್ವೇಷಿ ಎಂಬ ಅಪವಾದ ಬರದಂತೆ ವರ್ತಿಸಿ, ಸಾಧನಾ ಕಾರ್ಯಗಳಲ್ಲಿ ಕಳಪೆ ಮಟ್ಟದ ಪ್ರಯತ್ನ ಮಾಡುವಿರಿ, ಅತಿ ಚಾಂಚಲ್ಯದವರಾಗಿ ಬಿಂಬಿಸಿಕೊಳ್ಳುವಿರಿ, ಶ್ರೀ ಶನೈಶ್ಚರನ ಮತ್ತು ಶ್ರೀ ಕಾರ್ತಿಕೇಯಸ್ವಾಮಿಯ ಸೇವೆಗಳಿಂದ ಶುಭ.
ಧನಸ್ಸು : ಆಕಸ್ಮಿಕ ಘಟನೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುವುದು, ಕುಟುಂಬಸ್ಥರ ದೊಷಗಳನ್ನು ಎತ್ತಿ ಹಿಡಿದು ವಾದಕಕಿಳಿಯುವಿರಿ, ಜೀವನದಲ್ಲಿ ಬಹಳವಾಗಿ ಬಳಲುವ ಸಂಭವಗಳಿವೆ, ಶ್ರೀ ಶನೈಶ್ಚರನ ಹಾಗೂ ಶ್ರೀ ದಕ್ಷಿಣಾಮೂರ್ತಿಯ ಸೇವೆಗಳಿಂದ ಶುಭ.
ಮಕರ : ಸರಳ ಸಜ್ಜನಿಕೆಯ ನಡೆಗಳಿಂದ ಪ್ರೀತಿಗೆ ಪಾತ್ರರಾಗುವಿರಿ, ಸಾಕಷ್ಟು ಬಯಕೆಯ ಈಡೇರಿಕೆಗಳಿಗಾಗಿ ಪ್ರಯತ್ನಿಸುವಿರಿ, ಕಷ್ಟ ನಷ್ಟಗಳ ನಡುವೆಯೇ ಸಾಧನೆಗಳಿದಿರುವಿರಿ, ಶ್ರೀ ಶನೈಶ್ಚರ ಸೇವೆಯಿಂದ ಶುಭ.
ಕುಂಭ : ಕೋಪಿಷ್ಟ ಮತ್ತು ಆಲ¸ಸಿಗರಾಗಿ ನಿಮ್ಮ ಕಾರ್ಯಗಳಲ್ಲಿ ಹಿನ್ನಡೆ, ಸೇವಾ ಕಾರ್ಯಗಳಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯವಿರದೆ, ನಾನಾ ರೀತಿಯ ಖರ್ಚುಗಳಿಂದ ಮುಗ್ಗಟ್ಟು ಅನುಭವಿಸುವಿರಿ, ಶ್ರೀ ಈಶ್ವರನ ಸೇವೆಯಿಂದ ಶುಭ.
ಮೀನ : ಇಷ್ಟ ಬಂಧುಗಳಿಗೆ ಅನುಕೂಲರಾಗಿದ್ದೀರಿ, ಅಭಿವೃದ್ಧಿಯ ಪಥದಲ್ಲಿ ಸಾಗಲೆತ್ನಿಸುವಿರಿ, ಪಶು ಸಂಗೋಪನೆ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದುವಿರಿ ಶ್ರೀ ದಕ್ಷಿಣಾಮೂರ್ತಿಯ ಸೇವೆಯಿಂದ ಶುಭ.