ಬೆಂಗಳೂರು,: ಲೋಕಸಭಾ ಚುನಾವಣೆಗೆ ರಾಜ್ಯದ ಬಹುತೇಕ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಪ್ರಕಟಿಸಿದೆ. ಕೋಲಾರ ಹೊರತುಪಡಿಸಿ ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಗೂ ಬಳ್ಳಾರಿ ಲೋಕಸಭಾ ಜ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಶುಕ್ರವಾರ ಪ್ರಕಟಿಸಿದೆ. ಕೋಲಾರ ಕ್ಷೇತ್ರದ ಟಿಕೆಟ್ ಕಾಯ್ದಿರಿಸಿದೆ.
ಕೋಲಾರ ಕ್ಷೇತ್ರಕ್ಕಾಗಿ ಸಚಿವ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಗುಂಪುಗಳ ಕಾಂಗ್ರೆಸ್ ನಾಯಕೆರ ನಡುವೆ ಹಗ್ಗ-ಜಗ್ಗಾಟ ನಡೆಯುತ್ತಿದೆ. ಸಚಿವ ಮಿನಿಯಪ್ಪ ಬಗ್ಗೆ ಮುನಿಸಿಕೊಂಡಿರುವ ಅನೇಕ ಶಾಸಕರು ಕೆಲವು ದಿನಗಳ ಹಿಂದೆ ರಾಜೀನಾಮೆಗೆ ಮುಂದಾಗಿ ಕೋಲಾಹಲಕ್ಕೆ ಕಾರಣರಾಗಿದ್ದರು. ಈ ಬೆಳವಣಿಗೆ ಬಗ್ಗೆ ವ್ಯಂಗ್ಯ ದಾಟಿಯಲ್ಲಿ ಟೀಕಿಸಿರುವ ಮುನಿಯಪ್ಪ ಯಾರೂ ರಾಜೀನಾಮೆ ನೀಡಲ್ಲ, ಅದೆಲ್ಲಾ ಹೈಡ್ರಾಮಾ ಎಂದಿದ್ದರು.
ಒಟ್ಟಾರೆ ವಿಧ್ಯಮಾನಗಳನ್ನು ಗಮನಿಸಿರುವ ಕಾಂಗ್ರೆಸ್ ಹೈಕಮಾಂಡ್ ಕೋಲಾರ ಕ್ಷೇತ್ರಕ್ಕೆ ನುನಿಯಪ್ಪ-ರಮೇಶ್ ಕುಮಾರ್ ಗುಂಪನ್ನು ಹೊರತುಪಡಿಸಿ ಮೂರನೇ ವ್ಯಕ್ತಿಗೆ ಟಿಕೆಟ್ ಕೊಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಹಾಗಾಗಿ ಶುಕ್ರವಾರ ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರೂ ಕೋಲಾರ ಕ್ಷೇತ್ರಕ್ಕೆ ಯಾರನ್ನೂ ಹೆಸರಿಸಿಲ್ಲ.
9ನೇ ಪಟ್ಟಿ ಹೀಗಿದೆ:
-
ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ
-
ಬಳ್ಳಾರಿ : ಇ ತುಕರಾಂ,
-
ಚಾಮರಾಜನಗರ : ಸುನೀಲ್ ಬೋಸ್






















































