ಮೈಸೂರು: ರಾಜ್ಯ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಜಯಗಳಿಸಿದ್ದಾರೆ.
ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದ ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ ಅವರು 5,267 ಮತಗಳಿಂದ ಗೆಲುವು ಸಾಧಿಸಿದರು.
ಮತಗಳ ಎಣಿಕೆಯುದ್ದಕ್ಕೂ ಮುನ್ನಡೆಯಲ್ಲಿದ್ದ ಭೋಜೇಗೌಡರು ಮೊದಲ ಪ್ರಾಶಸ್ತ್ರ ಮತಗಳಲ್ಲೇ ಅಂದರೆ, 9,829 ಮತ ಗಳಿಸಿ ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ 4,562 ಮತ ಪಡೆದಿದ್ದಾರೆ.