ದೇವನಹಳ್ಳಿ : ಏರ್ ಪೋರ್ಟ್ ಟೋಲ್ ನಲ್ಲಿ ಯಮವೇಗದಲ್ಲಿ ಬಂದ ಟ್ರಕ್ ನಿಂದ ಟೋಲ್ ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೇವನಹಳ್ಳಿಯ ಸಾದಹಳ್ಳಿ ಟೋಲ್ ಬಳಿ ಘಟನೆ ನಡೆದಿದ್ದು, ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದು, ಕಂಠ ಪೂರ್ತಿ ಕುಡಿದ ಚಾಲಕನೊಬ್ಬ ಬೃಹತ್ ಟ್ರಕ್‌ನ್ನು ಚಾಲನೆ ಮಾಡಿಕೊಂಡು ಬಂದಿದ್ದಾನೆ. ಟೋಲ್ ನಲ್ಲಿ ಅತಿ ವೇಗವಾಗಿ ಟ್ರಕ್ ಚಲಿಸಿದ್ದು , ಟ್ರಕ್ ನಿಲ್ಲಿಸುವಂತೆ ಟೋಲ್ ಸಿಬ್ಬಂದಿ ಸೂಚನೆ ನೀಡ್ತಾ ಇದ್ರೂ ಚಾಲಕ ಯಾವುದಕ್ಕೂ ಕ್ಯಾರೇ ಅನ್ನದೆ ನುಗ್ಗಿದ್ದಾನೆ. ಚಾಲಕ ಕೂದಲೆಳೆಯ ಅಂತರದಲ್ಲಿ ಟ್ರಕ್ ಕೆಳಗೆ ಸಿಲುಕದೆ ಪ್ರಾಣಾಪಯದಿಂದ ಪಾರಾಗಿದ್ದಾನೆ.
ಈ ಅವಘಡ ಕುರಿತಂತೆ ಪೊಲೀಸರು ಪರಿಶೀಲನೆ ನಡೆಸಿದ್ದು, ಚಾಲಕನ ಪತ್ತೆಗಾಗಿ ಬಲೆ ಬೀಸಿದ್ದಾರೆ. .