ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ಗುಂಡಿನ ದಾಳಿ ನಡೆಸಿರುವ ಮೂವರು ಶಂಕಿತ ಉಗ್ರರ ರೇಖಾಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಮಂಗಳವಾರ ಪಹಲ್ಗಮ್ ಬಳಿ ಉಗ್ರರು ಹಿಂದೂಗಳನ್ನು ಗುರಿಯಾಗಿಸಿ ಪೈಶಾಚಿಕತೆ ಮೆರೆದಿದ್ದರು. 26 ಮಂದಿಯನ್ನು ಪತ್ನಿ-ಮಕ್ಕಳೆದುರೇ ಹತ್ಯೆ ಮಾಡಿದ್ದಾರೆ. ಮೂವರು ಶಾಸ್ತ್ರಧಾರಿ ಭಯೋತ್ಪಾದಕರ ಬಗ್ಗೆ ಸುಳಿವು ಸಿಕ್ಕಿದೆ ಎನ್ನಲಾಗಿದ್ದು ಅವರ ರೇಖಾ ಚಿತ್ರವನ್ನು ಸೇನಾ ಮೂಲಗಳು ಬಿಡುಗಡೆ ಮಾಡಿವೆ.
ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂಬ ಹೆಸರಿನ ವ್ಯಕ್ತಿಗಳು ಈ ಕೃತ್ಯ ನಡೆಸಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು ಸೇನಾ ಪದೇ ಭಯೋತ್ಪಾದಕರಿಗಾಗಿ ಬೇಟೆ ಕೈಗೊಂಡಿದೆ. ಅರಣ್ಯ ಪ್ರದೇಶ ಪ್ರವೇಶಿಸಿ ದಾಳಿಕೋರರು ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದ್ದು ಶೋಧಕಾರ್ಯ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಉಗ್ರರ ದಾಳಿ ವೇಳೆ ಬದುಕುಳಿದವರ ಮಾಹಿತಿ ಹಾಗೂ ಪ್ರಾಥಮಿಕ ವಿಧಿವಿಜ್ಞಾನ ವಿಶ್ಲೇಷಣೆ ಆಧರಿಸಿ ಶಂಕಿತರ ರೇಖಾ ಚಿತ್ರವನ್ನು ಸಿದ್ಧಪಡಿಸಿರುವ ಸೇನೆ, ಶಂಕಿತರ ಪತ್ತೆಗಾಗಿ ಬಿಗಿ ಕ್ರಮ ಕೈಗೊಂಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್ಎಫ್) ಹೊತ್ತುಕೊಂಡಿದೆ. ಲಷ್ಕರ್ ಮುಖ್ಯಸ್ಥ ಪಾಕ್ ಮೂಲದ ಸೈಫುಲ್ಲಾ ಎಂಬಾತನೇ ಪಹಲ್ಗಮ್ ದಾಳಿಯ ರೂವಾರಿ ಎನ್ನಲಾಗುತ್ತಿದೆ.