ಬೆಂಗಳೂರು: ನಾಡು ಶಿವರಾತ್ರಿ ಮಹಾವೈಭವಕ್ಕೆ ಸಾಕ್ಷಿಯಾಯಿತು. ಎಲ್ಲೆಲ್ಲೂ ಮಹಾದೇವನ ಆರಾಧನೆಯಲ್ಲಿ ಆಸ್ತಿಕ ಸಮುದಾಯ ತಲ್ಲೀನವಾಗಿತ್ತು. ಇದೇ ವೇಳೆ ಕ್ಷೇತ್ರದ ಜನರೊಂದಿಗೆ ಬಹುಕಾಲ ಕಳೆಯುವ ನಾಯಕ ಎಂದೇ ಬಿಂಬಿತವಾಗಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಶಿವಭಕ್ರರ ಜೊತೆ ದೇಗುಲ ಯಾತ್ರೆ ಕೈಗೊಂಡು ಗಮನಸೆಳೆದರು.
ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವ ಗಮನಸೆಳೆಯಿತು. ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಸಚಿವ ಎಸ್.ಟಿ. ಸೋಮಶೇಖರ್ ಅವರು, ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕ್ಷೇತ್ರದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಜಾತ್ರಾ ವೈಭವವನ್ನು ಕಣ್ತುಂಬಿಕೊಂಡರು.
ಲಕ್ಚ್ಮೀಪುರದಲ್ಲಿ ಶ್ರೀ ಶನೇಶ್ವರಸ್ವಾಮಿಯ ಮಹಾಶಿವರಾತ್ರಿ ಬ್ತಹ್ಮರಥೋತ್ಸವ ಹಾಗೂ ಜಾತ್ರಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಶಿವರಾತ್ರಿ ಹಬ್ಬದಂದು ಬಹುತೇಕರು ಉಪವಾಸ ವ್ರತ ಕೈಗೊಂಡು ಜಾಗರಣೆ ಮಾಡಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಶಿವನನ್ನು ಆರಾಧಿಸುವುದರಿಂದ ಮನಸಿಗೆ ಶಾಂತಿ ಸಿಗಲಿದೆ ಎಂದರು. ಸರ್ವರಿಗೂ ಮಹಾದೇವ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.