ಸಚಿವ. ರಾಮಲಿಂಗಾರೆಡ್ಡಿರವರ ಕ್ಷೇತ್ರದ ಶಾಲೆಗಳು ಇದೀಗ ಹೈಟೆಕ್ ಸ್ಪರ್ಶ ಪಡೆದು ನಾಡಿಗ ಗಮನಸೆಳೆದಿದೆ. ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಆಡುಗೋಡಿ ಕೆಪಿಎಸ್ ಶಾಲೆಯಲ್ಲಿ Smart Class ಉದ್ಘಾಟನೆಯ ಸನ್ನಿವೇಶ ಗಮನಸೆಳೆಯಿತು.
“ನ ಭೂತೋ ನ ಭವಿಷ್ಯತೆ” ಎನ್ನುವಂತೆ ತನ್ನದೇ ಆದ ವಿಶಿಷ್ಟತೆಗಳಿಂದ, ಅತ್ಯಾಧುನಿಕ ಸೌಲಭ್ಯಗಳಿಂದ, ಅಡುಗೋಡಿಯ ಕೆಪಿಎಸ್ ಶಾಲೆಯು ವಿದ್ಯಾರ್ಥಿ ವಿದ್ಯಾರ್ಥಿನಿಯರ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗುತ್ತಿದೆ. ಶನಿವಾರ (12.07.24ರಂದು) ಆಡುಗೋಡಿಯ ಕೆಪಿಎಸ್ ಶಾಲೆಗೆ ಆಧುನಿಕ ಸವಲತ್ತು ಸಿಕ್ಜಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಶೇಷ ಆಸಕ್ತಿ ,ಕಳಕಳಿ ಮತ್ತು ನೆರವಿನಿಂದ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜಿನಲ್ಲಿ ಸ್ಮಾರ್ಟ್ ತರಗತಿ ಕಲ್ಪಿಸಲಾಗಿದ್ದು ಈ ಸೌಲಭ್ಯಗಳನ್ನು ಉದ್ಘಾಟಿಸಲಾಯಿತು.
ಅನೇಕ ಶೈಕ್ಷಣಿಕ ಸೌಲಭ್ಯಗಳು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಕೆಪಿಎಸ್ ಅಡುಗೋಡಿ ಶಾಲೆಯು, ಪ್ರಸಕ್ತ ವರ್ಷ ಶೇಕಡಾ 82 ಫಲಿತಾಂಶವನ್ನು ಪಿಯುಸಿಯಲ್ಲಿ… ಶೇಕಡಾ 85 ಫಲಿತಾಂಶವನ್ನು ಎಸ್‌ಎಸ್‌ಎಲ್‌ಸಿ ಯಲ್ಲಿ ಪಡೆದಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇಕಡಾ ನೂರರಷ್ಟು ಫಲಿತಾಂಶ ಪಡೆಯಬೇಕೆಂದು ಸಚಿವರು ಕಿವಿಮಾತು ಹೇಳಿದರು.
ಎಲ್ಲಾ ಕ್ಷೇತ್ರಗಳಿಗೂ ಮಾದರಿ:
ಇದೇ ವೇಳೆ ಬಿಟಿಎಂ ಲೇಔಟ್ ಸುತ್ತಮುತ್ತಲ ಶಾಲೆಯ ಪ್ರಗತಿ ಬಗ್ಗೆ ಕೊಂಡಾಡಿದ ಅತಿಥಿಗಳು, ಸಚಿವ ರಾಮಲಿಂಗ ರೆಡ್ಡಿ ಅವರ ಕ್ಷೇತ್ರದ ಶಾಲೆಗಳಂತೆಯೇ, ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾದಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಬದಲಾಗುವುದರಲ್ಲಿ ಸಂಶಯವಿಲ್ಲ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ್ ಸೊರಕೆ, CSR ಯೋಜನೆಯಡಿ 6 Smart Class ಗಳನ್ನು ಶಾಲೆಗೆ ದೇಣಿಗೆಯಾಗಿ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮನೋಹರ್ ಎಸ್., ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಧರ್ ಸಿ ಎನ್,, ಪ್ರಧಾನ ವ್ಯವಸ್ಥಾಪಕ ಪ್ರಕಾಶ್ ಟಿ ಆರ್ , ಪ್ರಧಾನ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು, ಕ್ಷತ್ರ ಶಿಕ್ಷಣಾಧಿಕಾರಿ ಶ್ರೀಮತಿ ಡಾಕ್ಟರ್ ಸಿ ಎನ್ ಶಶಿಕಲಾ, ಕೆಪಿಎಸ್ ಆಡುಗೋಡಿ ಇದರ ಪ್ರಾಂಶುಪಾಲ ಶ್ರೀಯುತ ದೊರೆಸ್ವಾಮಿ, ಮಾಜಿ ನಗರಸಭಾ ಸದಸ್ಯರಾದ ಮೋಹನ್, ಚಂದ್ರಪ್ಪ, ರಿಜ್ವಾನ್, SDMC ಸದಸ್ಯ ಅನಂದ್ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.