ಬೆಂಗಳೂರು: ಜನಪ್ರಿಯ ನಾಯಕ ಸದಾನಂದಗೌಡರ ವಿರುದ್ಧ ಭಾರೀ ಸಂಚೊಂದು ನಡೆದಂತಿದೆ. ಈ ಕುರಿತು ಸದಾನಂದಗೌಡರು ಪೊಲೀಸರಿಗೆ ನೀಡಿರುವ ದೂರು ಕುತೂಹಲದ ಕೇಂದ್ರಬಿಂದುವಾಗಿದೆ.
ಡಿ.ವಿ.ಸದಾನಂದ ಗೌಡರನ್ನು ಹೋಲುವ ವೀಡಿಯೋ ಬಳಸಿರುವ ಅಶ್ಲೀಲ ಸಂಭಾಷಣೆಯನ್ನು ಒಳಗೊಂಡ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಣದಲ್ಲಿ ಹರಿದಾಡಿದೆ. ಈ ವಿಚಾರ ಸದಾನದಗೌಡರ ಆಪ್ತರನ್ನು ಹಾಗೂ ರಾಜಕೀಯ ನಾಯಕರನ್ನು ಮುಜುಗರಕ್ಕೀಡು ಮಾಡಿದೆ.
ಕೆಲ ಸಮಯದ ಹಿಂದಷ್ಟೇ ಅಶ್ಲೀಲ ವೀಡಿಯೋ ಬಿಡುಗಡೆ ಮಾಡಲು ಕಿಡಿಗೇಡಿಗಳ ಸಂಚು ನಡೆದಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಮಾನ ಹಾನಿಗೆ ಕಾರಣವಾಗುವ ರೀತಿ ಯಾವುದೇ ಮಾಧ್ಯಮಗಳಲ್ಲಿ ವರದಿ ಮಾಡದಂತೆ ಹಲವು ನಾಯಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಅದರ ಬೆನ್ನಲ್ಲೇ ಸದಾನಂದಗೌಡರನ್ನು ಹೋಲುವ ಫೊಟೋ ಇರುವ, ಅಶ್ಲೀಲ ಸಂಭಾಷಣೆ ರೀತಿಯ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಇದನ್ನೂ ಓದಿ.. ಫೇಸ್ಬುಕ್ನಲ್ಲಿ ಡಿವಿಎಸ್ ಸ್ಪಷ್ಟನೆ.. ಪ್ರತಿಧ್ವನಿ
ಈ ಕುರಿತಂತೆ ಪೊಲೀಸರಿಗೆ ದೂರು ನೀಡಿರುವ ಸದಾನಂದಗೌಡರು ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ.