ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರು ಆಯ್ಜೆಯಾಗಿದ್ದಾರೆ. ಸಂಘದ ಅತ್ಯುನ್ನತ ಜವಾಬ್ಧಾರಿಗಳಲ್ಲೊಂದಾಗಿರುವ ಸರಕಾರ್ಯವಾಹರ ಆಯ್ಕೆ ಪ್ರಕ್ರಿಯೆ ಬೆಂಗಳೂರಿನ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದಿದೆ. ಆರೆಸ್ಸೆಸ್‌ನ ಮಹಾಪ್ರಧಾನ ಸಭೆ ಎಂದೇ ಕರೆಯಲ್ಪಡುವ ಅಖಿಲ ಭಾರತ ಪ್ರತಿನಿಧಿ ಸಭಾ ಭೈಠಕ್‌ನಲ್ಲಿ ಸಂಘಟನೆಯ ವಿವಿಧ ಜವಾಬ್ಧಾರಿಗಳನ್ನು ಹಂಚುವುದು ಸಾಮಾನ್ಯ ಪ್ರಕ್ರಿಯೆ. ಈ ಪ್ರಕ್ರಿಯೆ ಮೂಲಕವೇ ದತ್ತಾತ್ರೇಯ ಹೊಸಬಾಳೆಯವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ.
ಸಂಘದ ಸರಸಂಘಚಾಲಕರ ಹುದ್ದೆಯ ನಂತರದ ಹುದ್ದೆ ಇದಾಗಿದೆ. ಕರ್ನಾಟಕ ಮೂಲದವರೇ ಆಗಿರುವ ಮಾನನೀಯ ದತ್ತಾತ್ರೇಯ ಹೊಸಬಾಳೆಯರು ಎಬಿವಿಪಿ ಸಹಿತ ಸಂಘದ ವಿವಿಧ ಕ್ಷೇತ್ರಗಳಲ್ಲಿ ಪೂರ್ಣಾವಧಿಯಾಗಿ ಜವಾಬ್ಧಾರಿ ನಿರ್ವಹಿಸಿದವರು. ಈ ವರೆಗೂ ಸಹ ಸರಕಾರ್ಯವಾಹರಾಗಿ ಈಶಾನ್ಯ ಭಾರತ, ದೆಹಲಿ, ಕೇಂದ್ರಸ್ಥಾನ ಸಹಿತ ಹಲವು ಭಾಗಗಳಲ್ಲಿ ಸಂಘಟನೆಯ ಜವಾಬ್ಧಾರಿ ನಿರ್ವಹಿಸಿದ್ದಾರೆ.
ಪ್ರಸ್ತುತ ಸಹಕಾರ್ಯವಾಹರಾಗಿದ್ದ ಮಾನನೀಯ ಮುಕುಂದ್ ಹಾಗೂ ದತ್ತಾತ್ರೇಯ ಹೊಸಬಾಳೆಯವರ ಪೈಕಿ ಯಾರು ಸರಕಾರ್ಯವಾಹರಾಗುತ್ತಾರೆ ಎಂಬ ಕುತೂಹಲ ಇತ್ತು. ಇದೀಗ ಹಿರಿಯ ಪ್ರಮುಖರಲ್ಲೊಬ್ಬರಾದ ದತ್ತಾತ್ರೇಯ ಹೊಸಬಾಳೆಯವರನ್ನು ಪ್ರತಿನಿಧಿ ಸಬಾ ಭೈಟಕ್‌ನಲ್ಲಿ ಈ ಜವಾಬ್ಧಾರಿ ನಿರ್ವಹಿಸುವ ಬಗ್ಗೆ ಘೋಷಿಸಲಾಗಿದೆ.
Bangaluru : Akhil Bharatiya Pratinidhi Sabha of RSS elected Shri Dattatreya Hosabale as its ‘Sarkaryavah’. He was Sah Sarkaryavah of RSS since 2009. pic.twitter.com/ZZetAvuTo4
— RSS (@RSSorg) March 20, 2021
‘ದತ್ತಾಜೀ’ ಎಂದೇ ಖ್ಯಾತರಾದ ಇವರು, ಈ ಹುದ್ದೆಗೆ ನೇಮಕವಾದ ಎರಡನೆ ಕನ್ನಡಿಗರಾಗಿದ್ದಾರೆ. ಈ ಮೊದಲು ಹೊ.ವೆ. ಶೇಷಾದ್ರಿ ಅವರು ಸರಕಾರ್ಯವಾಹರಾಗಿದ್ದರು.