ಬೆಂಗಳೂರು: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬಂಧನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕುತೂಹಲಕಾರಿ ಸಂದೇಶ ರವಾನಿಸಿದ್ದಾರೆ. ನಾವು ನಮ್ಮ ಕೆಲಸ ಮಾಡಿದ್ದೇವೆ, ಇನ್ನು ನಿಮ್ಮ ಸರದಿ ಎಂದಿರುವ ಸಿದ್ದರಾಮಯ್ಯ ನುಡಿ ಅಚ್ಚರಿ ಮೂಡಿಸಿದೆ.
ಈ ಕುರಿತಂತೆ ಸಿದ್ದರಾಮಯ್ಯ ಅವರ ಟ್ವೀಟ್ ಗಮನಸೆಳೆದಿದೆ. ‘ರೇವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯೆ ಅಪಹರಣದ ಆರೋಪ ಪ್ರಕರಣವನ್ನು ವಿಶೇಷ ತನಿಖಾ ದಳದ ಮೂಲಕ ನಿಷ್ಪಕ್ಷಪಾತ, ಪಾರದರ್ಶಕ ತನಿಖೆಗೆ ಒಳಪಡಿಸಿ ನೊಂದವರ ಕಣ್ಣೀರು ಒರೆಸುವ ಪ್ರಯತ್ನವನ್ನು ಒಂದು ಸರ್ಕಾರವಾಗಿ ನಾವು ಮಾಡಿದ್ದೇವೆ’ ಎಂದು ಪೋಸ್ಟ್ ಹಾಕಿದ್ದಾರೆ. ‘ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಪ್ರಧಾನಿ ಮೋದಿಯವರೇ, ಈಗ ನಿಮ್ಮ ಸರದಿ’ ಎಂದಿರುವ ಸಿದ್ದರಾಮಯ್ಯ, ಮಹಿಳಾ ಕಾಳಜಿ ಬರೀ ನಿಮ್ಮ ಭಾಷಣಕ್ಕೆ ಸೀಮಿತವಲ್ಲ, ಕೃತಿಯಲ್ಲಿಯೂ ಇದೆ ಎನ್ನುವುದಾದರೆ ಬ್ರಿಜ್ಭೂಷಣ್ ಸಿಂಗ್, ಕುಲ್ದೀಪ್ ಸೆಂಗರ್ ರಂಥ ಮಹಿಳಾ ಪೀಡಕರು ಮಾಡಿರುವ ಪಾಪಕ್ಕೆ ತಕ್ಕ ಶಿಕ್ಷೆಯಾಗುವಂತೆ ಮಾಡಿ’ ಎಂದಿದ್ದಾರೆ.
‘ಈಗಲಾದರೂ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ಇಲ್ಲದಿದ್ದರೆ ನಿಮ್ಮ ಆತ್ಮಸಾಕ್ಷಿಯೂ ನಿಮ್ಮನ್ನು ಕ್ಷಮಿಸಲಾರದು’ ಎಂದವರು ಕಿವಿಮಾತು ಹೇಳಿದ್ದಾರೆ.
ರೇವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯೆ ಅಪಹರಣದ ಆರೋಪ ಪ್ರಕರಣವನ್ನು ವಿಶೇಷ ತನಿಖಾ ದಳದ ಮೂಲಕ ನಿಷ್ಪಕ್ಷಪಾತ, ಪಾರದರ್ಶಕ ತನಿಖೆಗೆ ಒಳಪಡಿಸಿ ನೊಂದವರ ಕಣ್ಣೀರು ಒರೆಸುವ ಪ್ರಯತ್ನವನ್ನು ಒಂದು ಸರ್ಕಾರವಾಗಿ ನಾವು ಮಾಡಿದ್ದೇವೆ.
ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಪ್ರಧಾನಿ @narendramodi ಅವರೇ ಈಗ ನಿಮ್ಮ ಸರದಿ,… pic.twitter.com/7lEVtLJ7ZW
— Siddaramaiah (@siddaramaiah) May 5, 2024