ನವದೆಹಲಿ: ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಯ ದಿ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ನಲ್ಲಿ ನಡೆದ ಕ್ರಿಸ್‌ಮಸ್ ಬೆಳಗಿನ ವಿಶೇಷ ಪ್ರಾರ್ಥನಾ ಸೇವೆಯಲ್ಲಿ ಭಾಗವಹಿಸಿದರು. ದೆಹಲಿ ಮತ್ತು ಉತ್ತರ ಭಾರತದ ಕ್ರೈಸ್ತ ಸಮುದಾಯದ ಭಾರಿ ಪ್ರಾರ್ಥನಾ ಕೂಟದಲ್ಲಿ ಪ್ರಧಾನಮಂತ್ರಿ ಉಪಸ್ಥಿತರಿದ್ದರು.
#WATCH | Prime Minister Narendra Modi attended the Christmas morning service at The Cathedral Church of the Redemption in Delhi along with a large congregation of Christians of Delhi and North India on the occassion of #Christmas2025 today.
The service included prayers,… pic.twitter.com/wVuQe6GYKQ
— ANI (@ANI) December 25, 2025
ಈ ಸಂದರ್ಭದಲ್ಲಿ ದೆಹಲಿಯ ಬಿಷಪ್ ರೆವರೆಂಡ್ ಡಾ. ಪಾಲ್ ಸ್ವರೂಪ್ ಅವರು ಪ್ರಧಾನಮಂತ್ರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನಾ ಸೇವೆಯಲ್ಲಿ ಕ್ರಿಸ್‌ಮಸ್ ಕ್ಯಾರೋಲ್‌ಗಳು, ಸ್ತುತಿಗೀತೆಗಳು ಹಾಗೂ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಪ್ರತಿಬಿಂಬಿಸುವ ವಿಶೇಷ ಪೂಜೆಗಳು ನೆರವೇರಿದವು.
ಕ್ರಿಸ್‌ಮಸ್ ಹಬ್ಬವು ಪ್ರೀತಿ, ಸೇವೆ ಮತ್ತು ಸಹಾನುಭೂತಿಯ ಸಂದೇಶವನ್ನು ಸಾರುತ್ತದೆ ಎಂದು ಕಾರ್ಯಕ್ರಮದಲ್ಲಿ ಬಿಂಬಿಸಲಾಯಿತು. ಪ್ರಧಾನಮಂತ್ರಿ ಅವರ ಉಪಸ್ಥಿತಿ ಕ್ರೈಸ್ತ ಸಮುದಾಯದಲ್ಲಿ ಆತ್ಮೀಯತೆ ಮತ್ತು ಸಂತಸದ ವಾತಾವರಣವನ್ನುಂಟು ಮಾಡಿತು.
ಹಬ್ಬದ ಸಂದರ್ಭದಲ್ಲಿ ವಿವಿಧ ಧರ್ಮಗಳ ನಡುವೆ ಸೌಹಾರ್ದತೆ ಮತ್ತು ಏಕತೆಯ ಸಂದೇಶವನ್ನು ಈ ಕಾರ್ಯಕ್ರಮ ಒತ್ತಿ ಹೇಳಿತು.



















































