ಉದ್ಯಾನವನಗಳಲ್ಲಿ ಅವಾಂತರ ನಡೆಯುತ್ತಲೇ ಇರುತ್ತವೆ. ಅದೇ ರೀತಿಯ ಎಡವಟ್ಟು ಪ್ರವಾಸಿಗನೊಬ್ಬನ ಜೀವದ ಜೊತೆ ಚೆಲ್ಲಾಟವಾಡುವ ರೀತಿ ಸಾಕ್ಷಿಯಾಗಿದೆ. ಮೊಸಳೆಯ ತದ್ರೂಪಿ ಕೃತಿ ಎಂದು ಭಾವಿಸಿ ಅದರ ಜೊತೆ ಸೆಲ್ಫೀ ತೆಗೆಯಲು ಮುಂದಾದ ನೆಹೆಮಿಯಾಸ್ ಚಿಪಾಡಾ ಎಂಬ ವ್ಯಕ್ತಿ, ಅದೇ ಜೀವಂತ ಮೊಸಳೆ ಎಂದು ಗೊತ್ತಾದಾಗ ನಡೆಯಬಾರದ ಘಟನೆ ನಡೆದಿದೆ. ಸೆಲ್ಫೀ ತೆಗೆಯುತ್ತಿದ್ದಾಗಲೇ ದಾಳಿ ಮಾಡಿದ ಮೊಸಳೆ, ಆ ಪ್ರವಾಸಿಗನನ್ನು ಕಚ್ಚಿಕೊಂಡು ಎಳೆದೊಯ್ದಿದೆ. ಈ ವ್ಯಕ್ತಿ ಜೊತೆಯಲ್ಲಿದ್ದವರು ಬೊಬ್ಬಿಡುತ್ತಾ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಈ ಘಟನೆ ನಡೆದದ್ದು ಫಿಲಿಫಿನ್ಸ್‌ನ ಕ್ಯಾಗಯಾನ್ ಡಿ ಒರೊ ನಗರದ ಅಮಾಯಾ ವ್ಯೂ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ. ನ.10ರಂದು ನಡೆದ ಘಟನೆಯ ವೀಡಿಯೋ ಈಗ ವೈರಲ್ ಆಗಿದೆ.. https://youtu.be/kNSpzkoYO1A
ಈ ವೇಳೆ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪ್ರವಾಸಿಗನನ್ನು ಮೊಸಳೆಯ ಬಾಯಿಯಿಂದ ರಕ್ಷಿಸಲಾಗಿದೆ. ಗಾಯಗೊಂಡಿದ್ದಾತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.