ಬೆಂಗಳೂರು: ಪೆಟ್ರೋಲ್ ದರ ಏರಿಕೆಯಾಗುತ್ತಿರುವ ಬೆಳವಣಿಗೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪರಿಸ್ಥಿತಿ ತಿಳಿಗೊಳಿಸಲು ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದೆ. ಇದೇ ವೇಳೆ ತೈಲೋತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಚಿಂತನೆಯೂ ನಡೆದಿದೆ.
ಕೇಂದ್ರ ಸರ್ಕಾರದ ಈ ಪ್ರಯತ್ನಕ್ಕೆ ಜಾತ್ಯತೀತ ಜನತಾದಳ ಆಕ್ಷೇಪ ವ್ಯಕ್ತಪಡಿಸಿದೆ. ತೈಲ ದರ ಏರಿಕೆ ವಿರುದ್ಧ ಜನರ ಆಕ್ರೋಶವನ್ನೇ ಬಳಸಿಕೊಂಡು, ದರ ಇಳಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು GSTಗೆ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ಬಗೆಗಿನ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಪೆಟ್ರೋಲಿಯಂ ಉತ್ಪನ್ನಗಳೇನಾದರೂ GSTಗೆ ಒಳಪಟ್ಟರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ ಎಂದು ಆತಂಕ ಹೊರಹಾಕಿದ್ದಾರೆ.
ತೈಲ ದರ ಏರಿಕೆ ವಿರುದ್ಧ ಜನರ ಆಕ್ರೋಶವನ್ನೇ ಬಳಸಿಕೊಂಡು, ದರ ಇಳಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು GSTಗೆ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ಬಗೆಗಿನ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳೇನಾದರೂ GSTಗೆ ಒಳಪಟ್ಟರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ.
1/6— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 7, 2021
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ರಾಜ್ಯಗಳ ಪ್ರಮುಖ ಆದಾಯದ ಮೂಲಗಳಲ್ಲೊಂದು. ಕೇಂದ್ರ ಸರ್ಕಾರ ಮಿತಿ ಮೀರಿದ ತೆರಿಗೆ ವಿಧಿಸುತ್ತದೆ ಮತ್ತು ರಾಜ್ಯಗಳಿಗಿಂತಲೂ ಅಧಿಕ ಆದಾಯವನ್ನು ಸಂಗ್ರಹಿಸುತ್ತದೆ. ಈಗ ಅದೂ ಸಾಲದು ಎಂಬಂತೆ ಪೆಟ್ರೋಲಿಯಂ ಅನ್ನು GSTಗೆ ತಂದು ರಾಜ್ಯಗಳು ಪಡೆಯುತ್ತಿರುವ ಆದಾಯವನ್ನೂ ಲಪಟಾಯಿಸುವ ತಂತ್ರವನ್ನು ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ರಾಜ್ಯಗಳ ಪ್ರಮುಖ ಆದಾಯದ ಮೂಲಗಳಲ್ಲೊಂದು. ಕೇಂದ್ರ ಸರ್ಕಾರ ಮಿತಿ ಮೀರಿದ ತೆರಿಗೆ ವಿಧಿಸುತ್ತದೆ ಮತ್ತು ರಾಜ್ಯಗಳಿಗಿಂತಲೂ ಅಧಿಕ ಆದಾಯವನ್ನು ಸಂಗ್ರಹಿಸುತ್ತದೆ. ಈಗ ಅದೂ ಸಾಲದು ಎಂಬಂತೆ ಪೆಟ್ರೋಲಿಯಂ ಅನ್ನು GSTಗೆ ತಂದು ರಾಜ್ಯಗಳು ಪಡೆಯುತ್ತಿರುವ ಆದಾಯವನ್ನೂ ಲಪಟಾಯಿಸುವ ತಂತ್ರವನ್ನು ಮಾಡಿದೆ.
2/6— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 7, 2021
ರಾಜ್ಯಗಳು GST ವ್ಯವಸ್ಥೆಗೆ ಒಪ್ಪಿಗೆ ನೀಡಿದ ನಂತರ ನೀಡಬೇಕಿದ್ದ ಪಾಲು, ಪರಿಹಾರವನ್ನು ಕೇಂದ್ರ ಈ ವರೆಗೆ ಸರಿಯಾಗಿ ಕೊಟ್ಟೇ ಇಲ್ಲ. ಸಾವಿರಾರು ಕೋಟಿ ಬಾಕಿಯನ್ನು ಇನ್ನೂ ಉಳಿಸಿಕೊಂಡಿದೆ. ಬಾಕಿಗಾಗಿ ರಾಜ್ಯಗಳು ಕೇಂದ್ರವನ್ನು ಬೇಡಾಡಿ ಬಸವಳಿದಿವೆ. ಈಗ ಪೆಟ್ರೋಲಿಯಂ ಆದಾಯವನ್ನು ಕೇಂದ್ರಕ್ಕೆ ಒಪ್ಪಿಸಿದರೆ ರಾಜ್ಯಗಳ ಪಾಡು ಶೋಚನೀಯವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ರಾಜ್ಯಗಳು GST ವ್ಯವಸ್ಥೆಗೆ ಒಪ್ಪಿಗೆ ನೀಡಿದ ನಂತರ ನೀಡಬೇಕಿದ್ದ ಪಾಲು, ಪರಿಹಾರವನ್ನು ಕೇಂದ್ರ ಈ ವರೆಗೆ ಸರಿಯಾಗಿ ಕೊಟ್ಟೇ ಇಲ್ಲ. ಸಾವಿರಾರು ಕೋಟಿ ಬಾಕಿಯನ್ನು ಇನ್ನೂ ಉಳಿಸಿಕೊಂಡಿದೆ. ಬಾಕಿಗಾಗಿ ರಾಜ್ಯಗಳು ಕೇಂದ್ರವನ್ನು ಬೇಡಾಡಿ ಬಸವಳಿದಿವೆ. ಈಗ ಪೆಟ್ರೋಲಿಯಂ ಆದಾಯವನ್ನು ಕೇಂದ್ರಕ್ಕೆ ಒಪ್ಪಿಸಿದರೆ ರಾಜ್ಯಗಳ ಪಾಡು ಶೋಚನೀಯವಾಗಲಿದೆ.
3/6— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 7, 2021
ರಾಜ್ಯಗಳು ಆದಾಯವಿಲ್ಲದೇ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲದೇ ಸಂಕಷ್ಟ ಅನುಭವಿಸಬೇಕಾಗುತ್ತದೆ. ಕೊನೆಗೆ ಕೊರತೆ ಬಜೆಟ್ ಮಂಡಿಸಬೇಕಾಗುತ್ತದೆ. ಅಥವಾ, ಬಜೆಟ್ ಗಾತ್ರವನ್ನೇ ಇಳಿಸಬೇಕಾದ ಸಂದರ್ಭ ಬರಲಿದೆ. ಇದು ಅಭಿವೃದ್ಧಿ ವಿಚಾರದಲ್ಲಿ ಹಿಂದಕ್ಕೆ ಓಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹೆಚ್ಡಿಕೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಗಳು ಆದಾಯವಿಲ್ಲದೇ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲದೇ ಸಂಕಷ್ಟ ಅನುಭವಿಸಬೇಕಾಗುತ್ತದೆ. ಕೊನೆಗೆ ಕೊರತೆ ಬಜೆಟ್ ಮಂಡಿಸಬೇಕಾಗುತ್ತದೆ. ಅಥವಾ, ಬಜೆಟ್ ಗಾತ್ರವನ್ನೇ ಇಳಿಸಬೇಕಾದ ಸಂದರ್ಭ ಬರಲಿದೆ. ಇದು ಅಭಿವೃದ್ಧಿ ವಿಚಾರದಲ್ಲಿ ಹಿಂದಕ್ಕೆ ಓಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
4/6— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 7, 2021
ತೈಲ ಬೆಲೆ ಇಳಿಸುವ ಕಾಳಜಿ ಕೇಂದ್ರಕ್ಕೆ ಇದ್ದಲ್ಲಿ ತಾನು ವಿಧಿಸುತ್ತಿರುವ ತೆರಿಗೆಯನ್ನು ಈ ಕೂಡಲೇ ತಗ್ಗಿಸಲಿ. ನಂತರ ರಾಜ್ಯಗಳಿಗೂ ತೆರಿಗೆ ತಗ್ಗಿಸಲು ಹೇಳಲಿ. ಅದು ಬಿಟ್ಟು ರಾಜ್ಯಗಳ ಪಾಲಿನ ಹಣಕ್ಕೂ ಕೇಂದ್ರ ಸರ್ಕಾರ ಕೈ ಇಡಬಾರದು. ರಾಜ್ಯಗಳು ಚೆನ್ನಾಗಿದ್ದರೆ, ದೇಶವೂ ಚೆನ್ನಾಗಿರುತ್ತದೆ. ರಾಜ್ಯಗಳನ್ನು ಶೋಷಿಸಿ ದೇಶ ಕಟ್ಟಲಾಗುತ್ತದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ತೈಲ ಬೆಲೆ ಇಳಿಸುವ ಕಾಳಜಿ ಕೇಂದ್ರಕ್ಕೆ ಇದ್ದಲ್ಲಿ ತಾನು ವಿಧಿಸುತ್ತಿರುವ ತೆರಿಗೆಯನ್ನು ಈ ಕೂಡಲೇ ತಗ್ಗಿಸಲಿ. ನಂತರ ರಾಜ್ಯಗಳಿಗೂ ತೆರಿಗೆ ತಗ್ಗಿಸಲು ಹೇಳಲಿ. ಅದು ಬಿಟ್ಟು ರಾಜ್ಯಗಳ ಪಾಲಿನ ಹಣಕ್ಕೂ ಕೇಂದ್ರ ಸರ್ಕಾರ ಕೈ ಇಡಬಾರದು. ರಾಜ್ಯಗಳು ಚೆನ್ನಾಗಿದ್ದರೆ, ದೇಶವೂ ಚೆನ್ನಾಗಿರುತ್ತದೆ. ರಾಜ್ಯಗಳನ್ನು ಶೋಷಿಸಿ ದೇಶ ಕಟ್ಟಲಾಗುತ್ತದೆಯೇ?
5/6— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 7, 2021
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದಕ್ಕೆ ಹಲವು ರಾಜ್ಯಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ರಾಜ್ಯದ ಮುಖ್ಯಮಂತ್ರಿಗಳೂ ಈ ವಿಚಾರದಲ್ಲಿ ಆಕ್ಷೇಪಣಾ ಮನೋಭಾವ ತಳೆಯಬೇಕು. ರಾಜ್ಯದ ಪ್ರಮುಖ ನಾಯಕರೂ ಈ ವಿಚಾರವಾಗಿ ಈಗಿನಿಂದಲೇ ಪ್ರತಿರೋಧ ವ್ಯಕ್ತಪಡಿಸಬೇಕು. ಇಲ್ಲವಾದರೆ, ಜಿಎಸ್ಟಿ ಕುಣಿಕೆ ನಮ್ಮನ್ನು ಕಾಡಲಿದೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದಕ್ಕೆ ಹಲವು ರಾಜ್ಯಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ರಾಜ್ಯದ ಮುಖ್ಯಮಂತ್ರಿಗಳೂ ಈ ವಿಚಾರದಲ್ಲಿ ಆಕ್ಷೇಪಣಾ ಮನೋಭಾವ ತಳೆಯಬೇಕು. ರಾಜ್ಯದ ಪ್ರಮುಖ ನಾಯಕರೂ ಈ ವಿಚಾರವಾಗಿ ಈಗಿನಿಂದಲೇ ಪ್ರತಿರೋಧ ವ್ಯಕ್ತಪಡಿಸಬೇಕು. ಇಲ್ಲವಾದರೆ, ಜಿಎಸ್ಟಿ ಕುಣಿಕೆ ನಮ್ಮನ್ನು ಕಾಡಲಿದೆ.
6/6— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 7, 2021