ಮಾ.15ರೊಳಗೆ ಮೀಸಲಾತಿ ಘೋಷಿಸದಿದ್ದರೆ ಚುನಾವಣೆಯಲ್ಲಿ ಉತ್ತರ: ಆಡಳಿತಾರೂಢ ಪಕ್ಷಕ್ಕೆ ಪಂಚಮಸಾಲಿ ಲಿಂಗಾಯತರ ಖಡಕ್ ಸಂದೇಶ..

ಬೆಂಗಳೂರು: ರಾಜ್ಯ ಬಿಜೆಪಿಗೆ ಪ್ರಬಲ ಪಂಚಮಸಾಲಿ ಲಿಂಗಾಯತ ಸಮುದಾಯ ಶಾಕ್ ನೀಡಿದೆ. ಬಹುಕಾಲದಿಂದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಕ್ಯಾರೇ ಎನ್ನದಿರುವ ಬಿಜೆಪಿ ಸರ್ಕಾರದ ನಿಲುವಿನ ವಿರುದ್ಧ ಪಂಚಮಸಾಲಿ ಲಿಂಗಾಯತರು ತೊಡೆ ತಟ್ಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವುದಾಗಿ ಆಡಳಿತಾರೂಢ ಬಿಜೆಪಿಗೆ ಕಡಕ್ ಸಂದೇಶ ರವಾನಿಸಿದ್ದಾರೆ. ಈ ಸಂಬಂಧ ಶುಕ್ರವಾರ ನಡೆದ ಪ್ರಮುಖರ ಸಭೆ ಕುತೂಹಲದ ಕೇಂದ್ರಬಿಂದುವಾಯಿತು. ಪಂಚಮಸಾಲಿ ಸತ್ಯಾಗ್ರಹದ ರಾಜ್ಯ ಕಾರ್ಯಕಾರಿಣೀ ನಿರ್ಣಯದಂತೆ ತಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆಯಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಕೂಡಲಸಂಗಮದ … Continue reading ಮಾ.15ರೊಳಗೆ ಮೀಸಲಾತಿ ಘೋಷಿಸದಿದ್ದರೆ ಚುನಾವಣೆಯಲ್ಲಿ ಉತ್ತರ: ಆಡಳಿತಾರೂಢ ಪಕ್ಷಕ್ಕೆ ಪಂಚಮಸಾಲಿ ಲಿಂಗಾಯತರ ಖಡಕ್ ಸಂದೇಶ..