ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಅಂಗವಾಗಿ ಮಂಗಳವಾರ ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನೆರೆದ ಕಲಾಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿಸಿತು.
ಆಳ್ವಾಸ್ ಕಾಲೇಜಿನ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭೆಯನ್ನು ಅನಾವರಣಗೊಳಿಸಿದರು. ಪ್ರಾಥಮಿಕದಿಂದ ಕಾಲೇಜಿನ 40 ವಿದ್ಯಾರ್ಥಿಗಳ ತಂಡ, ವೇದಿಕೆಯಲ್ಲಿ ನಿರ್ಮಿಸಿದ 2 ಮಲ್ಲಕಂಬದಲ್ಲಿ ನಡೆಸಿದ ಕಸರತ್ತುಗಳು, ವೇದಿಕೆ ಎರಡು ಬದಿಯಲ್ಲಿ ಹಾಕಿದ್ದ ರೋಪ್ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಾಡಿದ ಸಾಹಸಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿತ್ತು.
ವಿದ್ಯಾರ್ಥಿಗಳಿಂದ ಕಥಕ್ ಪಶ್ಚಿಮ ಬಂಗಾಲದ ಪುರುಲಿಯಾ ಸಿಂಹದ ಬೇಟೆ ನೃತ್ಯ, ಕ್ಲಾಸಿಕ್ ಹಾಗೂ ಮಾರ್ಷಲ್ ಆರ್ಟ್ಸ್ ಸಮ್ಮಿಲನಗೊಂಡಿರೊ ಮಣಿಪುರ ಸ್ಟಿಕ್ ಡ್ಯಾನ್ಸ್ಗಳು, ಗುಜರಾತಿನ ದಾಂಡಿಯಾ ನತ್ಯ, ನವರಂಗ್ ಕಥಕ್ ಪ್ರದರ್ಶನ, ಡೊಲ್ಲುಕುಣಿತ ತಡರಾತ್ರಿವರೆಗೂ ಮನಮೋಹಕವಾಗಿ ಮೂಡಿಬಂತು. ಈ ಸಂದರ್ಭ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರನ್ನು ಗೌರವಿಸಲಾಯಿತು.