ಬೆಂಗಳೂರು: ಕರ್ನಾಟಕದಲ್ಲಿ ಪರಿಪೂರ್ಣ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಿಸಿದ್ದು, 28 ಕ್ಷೇತ್ರಗಳ ಪೈಕಿ 17 ಕಡೆ ಬಿಜೆಪಿ ಗೆದ್ದಿದೆ, 9 ಸ್ಥಾನಗಳನ್ನು ಕಾಂಗ್ರೆಸ್ ಪಡೆದರೆ, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಭಾರಿಸಿದೆ. ಮಾಜಿ ಪ್ರಧಾನಿ ದೇವೇಗೌಡರ ತವರಿನಲ್ಲಿ ಜೆಡಿಎಸ್ ಪತನವಾಗಿರುವುದೇ ಫಲಿತಾಂಶದ ಅಚ್ಚರಿ.
ಈ ನಡುವೆ, ಈ ಬಾರಿಯೂ ಕರ್ನಾಟಕದಲ್ಲಿ 2004ರ ಫಲಿತಾಂಶವೇ ಮರುಕಳಿಸಿರುವುದು ಅಚ್ಚರಿಯ ಸಂಗತಿ. 2004ರಲ್ಲೂ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಹಂಚಿದ್ದವು.
ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ:
- ಬಾಗಲಕೋಟೆ : ಪಿಸಿ. ಗದ್ದಿಗೌಡರ್-ಬಿಜೆಪಿ
- ಬೆಂಗಳೂರು ಕೇಂದ್ರ : ಪಿ.ಸಿ.ಮೋಹನ್- ಬಿಜೆಪಿ
- ಬೆಂಗಳೂರು ಉತ್ತರ : ಶೋಭಾ ಕರಂದ್ಲಾಜೆ- ಬಿಜೆಪಿ
- ಬೆಂಗಳೂರು ದಕ್ಷಿಣ : ತೇಜಸ್ವಿ ಸೂರ್ಯ- ಬಿಜೆಪಿ
- ಬೆಂಗಳೂರು ಗ್ರಾಮಾಂತರ: ಡಾ. ಮಂಜುನಾಥ್- ಬಿಜೆಪಿ
- ಬೆಳಗಾವಿ : ಜಗದೀಶ್ ಶೆಟ್ಟರ್- ಬಿಜೆಪಿ
- ಚಿಕ್ಕಬಳ್ಳಾಪುರ : ಕೆ.ಸುಧಾಕರ್- ಬಿಜೆಪಿ
- ಚಿತ್ರದುರ್ಗ : ಗೋವಿಂದ ಕಾರಜೋಳ- ಬಿಜೆಪಿ
- ದಕ್ಷಿಣ ಕನ್ನಡ: ಬ್ರಿಜೇಶ್ ಚೌಟಾ- ಬಿಜೆಪಿ
- ಧಾರವಾಡ : ಪ್ರಲ್ಹಾದ್ ಜೋಶಿ- ಬಿಜೆಪಿ
- ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್- ಬಿಜೆಪಿ
- ಹಾವೇರಿ : ಬಸವರಾಜ ಬೊಮ್ಮಾಯಿ- ಬಿಜೆಪಿ
- ಶಿವಮೊಗ್ಗ: ಬಿ.ವೈ ರಾಘವೇಂದ್ರ-ಬಿಜೆಪಿ
- ತುಮಕೂರು: ವಿ.ಸೋಮಣ್ಣ- ಬಿಜೆಪಿ
- ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ- ಬಿಜೆಪಿ
- ಉತ್ತರ ಕನ್ನಡ: ವಿಶ್ವೇಶ್ವರ ಹೆಗಡೆ ಕಾಗೇರಿ- ಬಿಜೆಪಿ
- ಮಂಡ್ಯ: ಹೆಚ್ಡಿ ಕುಮಾರಸ್ವಾಮಿ-ಜೆಡಿಎಸ್
- ಕೋಲಾರ : ಎಂ ಮಲ್ಲೇಶ್ ಬಾಬು- ಜೆಡಿಎಸ್
- ವಿಜಯಪುರ : ರಮೇಶ್ ಜಿಗಜಿಣಗಿ- ಬಿಜೆಪಿ
- ಬಳ್ಳಾರಿ : ಇ.ತುಕಾರಾಂ- ಕಾಂಗ್ರೆಸ್
- ಬೀದರ್ : ಸಾಗರ್ ಈಶ್ವರ ಖಂಡ್ರೆ- ಕಾಂಗ್ರೆಸ್
- ಚಾಮರಾಜನಗರ : ಸುನಿಲ್ ಬೋಸ್- ಕಾಂಗ್ರೆಸ್
- ಚಿಕ್ಕೋಡಿ : ಪ್ರಿಯಾಂಕಾ ಸತೀಶ್ ಜಾರಕಿಹೊಳಿ- ಕಾಂಗ್ರೆಸ್
- ದಾವಣಗೆರೆ: ಪ್ರಭಾ ಮಲ್ಲಿಕಾರ್ಜುನ್- ಕಾಂಗ್ರೆಸ್
- ಕಲಬುರಗಿ: ರಾಧಾಕೃಷ್ಣ-ಕಾಂಗ್ರೆಸ್
- ಕೊಪ್ಪಳ : ಕೆ. ರಾಜಶೇಖರ್ ಬಸವರಾಜ ಹಿಟ್ನಾಳ್- ಕಾಂಗ್ರೆಸ್
- ರಾಯಚೂರು: ಜಿ ಕುಮಾರ್ ನಾಯಕ್- ಕಾಂಗ್ರೆಸ್
- ಹಾಸನ ಕ್ಷೇತ್ರ: ಶ್ರೇಯಸ್ ಪಟೇಲ್-ಕಾಂಗ್ರೆಸ್






















































