ಬೆಂಗಳೂರು: ಹಿಂದೆ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಬಿಜೆಪಿ-ಜೆಡಿಎಸ್ ನಾಯಕರು ಇದೀಗ ಪಾದಯಾತ್ರೆ ರಾಜಕಾರಣ ಮಾಡುತ್ತಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಇವರ ಜಂಟಿ ಹೋರಾಟ ಕೇಂದ್ರದಿಂದ ಅನುದಾನ ತರುವ ವಿಚಾರಕ್ಕೆ ನಡೆದಿದ್ದರೆ ರಾಜ್ಯಕ್ಕೆ ಒಳಿತಾಗುತ್ತಿತ್ತು ಎಂದು ಪ್ರತಿಪಾದಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಈ ಹಿಂದೆ ಹಾವು ಮುಂಗುಸಿಯ ಹಾಗೆ ಕಿತ್ತಾಡುತ್ತಿದ್ದರು, ಈಗ ಅಧಿಕಾರಕ್ಕಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಸಂಸತ್ತಿನಲ್ಲೂ ಮಾತನಾಡುವುದಿಲ್ಲ, ಹೊರಗಡೆಯೂ ಮಾತನಾಡುವುದಿಲ್ಲ.
ಈ ಹಿಂದೆ ನರೇಂದ್ರ ಮೋದಿಯರು ದೇಶದ ಜನರಿಗೆ ಕೊಟ್ಟಿದ್ದ ಯಾವುದೇ… pic.twitter.com/jrVM9sh2Wa
— Karnataka Congress (@INCKarnataka) August 9, 2024
ಈ ಹಿಂದೆ ನರೇಂದ್ರ ಮೋದಿಯರು ದೇಶದ ಜನರಿಗೆ ಕೊಟ್ಟಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ, ಇದರ ವಿರುದ್ಧ ಎಲ್ಲಿಯೂ ಪ್ರತಿಭಟನೆ ಮಾಡದೇ ಈಗ ತಮ್ಮ ಭ್ರಷ್ಟಾಚಾರಗಳನ್ನು ಮರೆಮಾಚಿಕೊಳ್ಳುವುದಕ್ಕಾಗಿ ಭ್ರಷ್ಟಾಚಾರಿಗಳೇ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ರಾಮಲಿಂಗ ರೆಡ್ಡಿ ವ್ಯಂಗ್ಯವಾಡಿದ್ದಾರೆ.