ಬೆಂಗಳೂರು: ಕೆಎಸ್ಆರ್ಟಿಸಿ ಅನುಷ್ಠಾನಗೊಳಿಸಿರುವ ಉಪಕ್ರಮಗಳಿಗೆ ರಾಷ್ಟ್ರೀಯ ಹಾಗೂ ವಿಶ್ವ ನಾವೀನ್ಯತೆ ಪ್ರಶಸ್ತಿಗಳು ಲಭಿಸಿವೇ.
ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 17, 18 ಮತ್ತು 21 ಫೆಬ್ರವರಿ 2025 ರಂದು ಮುಂಬೈನಲ್ಲಿ ನಡೆಯಲಿದೆ.
- ಉತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ
- ಕನಸುಗಳ ಕಂಪನಿಗಳು – ಉದ್ಯೋಗದಲ್ಲಿ ಆರೋಗ್ಯ ನಿರ್ವಹಣೆಗೆ ಗೌರವ
- ವರ್ಷದ ವ್ಯವಹಾರ ನಾಯಕ ಪ್ರಶಸ್ತಿ – ಕಾರ್ಯಸ್ಥಳ ಮತ್ತು ಜನಸಂಪತ್ತು ಅಭಿವೃದ್ಧಿ
- ವಿಶ್ವ ಆರೈಕೆ ಪ್ರಶಸ್ತಿ – ಉತ್ತಮ ಸಾರ್ವಜನಿಕ ಆರೋಗ್ಯ ಉಪಕ್ರಮ
- ವಿಶ್ವ ನಾವಿನ್ಯತೆ ಪ್ರಶಸ್ತಿ – ಆರೋಗ್ಯ ತಂತ್ರಜ್ಞಾನದಲ್ಲಿ ಉತ್ತಮ ನಾವೀನ್ಯತೆ
- ಜಾಗತಿಕ ತಯಾರಿಕಾ ನಾಯಕರ ಪ್ರಶಸ್ತಿ – ಸುಸ್ಥಿರತೆಯ ಗೌರವ
- ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿ.
ಹೀಗೆ ವಿವಿಧ ವಿಭಾಗಗಳಲ್ಲಿ ಕೆಎಸ್ಆರ್ಟಿಸಿಗೆ ಪ್ರಶಸ್ತಿಗಳು ಸಿಕ್ಕಿವೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.