ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ KSRTC.ಗೆ ಮಡಿಲಿಗೆ ಮತ್ತೆ 4 ಪ್ರಶಸ್ತಿಗಳು ಸೇರ್ಪಡೆಯಾಗಿವೆ. VKonnect India Media & Researchನ Asia’s Best Quality Awards ಪಡೆಯುವ ಮೂಲಕ KSRTC ಇಡೀ ದೇಶದ ಗಮನ ಸೆಳೆದಿದೆ.
ಕೆ.ಎಸ್.ಆರ್.ಟಿ.ಸಿ. ತನ್ನ ಉತ್ಪಾದಕತೆಯನ್ನು ಹೆಚ್ಚಿಸಲು ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿರುವ ವಿನೂತನ ಯೋಜನೆಗಳಿಗೆ Asia Business Quality Awards-2023 ರಲ್ಲಿ ನಾಲ್ಕು ಪ್ರಶಸ್ತಿಗಳು ಲಭಿಸಿರುತ್ತದೆ.
VKonnect India Media and Research ನವದೆಹಲಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಖ್ಯಾತ ಹಿಂದಿ, ಚಲನಚಿತ್ರ ಅಭಿನೇತ್ರಿ ಮುಗ್ದಾ ಗೊಡ್ಸೆ ಅವರು ಕೆ.ಎಸ್.ಅರ್.ಟಿ.ಸಿ.ಗೆ EXCELLENCE FOR OVERALL WELFARE INITIATIVE, OUTSTANDING EXEMPLARY WORK IN TRANSPORT SAFETY WELFARE, MOST INNOVATIVE BRANDING ಹಾಗೂ MARKETING AND MOST INNOVATIVE DEVELOPMENT FOR IT ಪ್ರಶಸ್ತಿಗಳನ್ನು 04 ವರ್ಗಗಳಲ್ಲಿ ಪ್ರದಾನ ಮಾಡಿದರು.
ಎಲ್.ಜಿ. ರಘುನಾಥ್, ಕಾರ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಾರ್ಯಾಗಾರ, ಎಸ್. ಎನ್. ಅರುಣ, ವಿಭಾಗೀಯ ನಿಯಂತ್ರಣಾಧಿಕಾರಿ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಕೆ.ಎನ್. ಶ್ಯಾಮಲಾ ,ಉಪ ಮುಖ್ಯ ಕಾನೂನು ಅಧಿಕಾರಿ, ಅವರು KSRTC ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
























































