ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ನಿಧನದಿಂದಾಗಿ ಬಿಜೆಪಿ ಪಾಳಯದಲ್ಲಿ ಶೋಕ ಆವರಿಸಿಕೊಂಡಿದೆ. ಮೋದಿ ಅವರ ಮಾತೃ ವಿಯೋಗ ಬಗ್ಗೆ ಬಿಜೆಪಿ ನಾಯಕರು ದುಃಖ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಸಂಸ್ಕಾರವನ್ನು ಕಲಿಸುವ ಪಾಠಗಳಿಗೆ ಉದಾಹರಣೆಯಂತಿದ್ದ ಮಾತೃಶ್ರೀ ಹೀರಾ ಬೆನ್ ಅವರ ಆದರ್ಶ ಎಲ್ಲರಿಗೂ ಮಾದರಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಣ್ಣಿಸಿದ್ದಾರೆ. ಹೀರಾ ಬೆನ್ ಅವರ ನಿಧನದ ಸುದ್ದಿ ಬಗ್ಗೆ ದುಃಖ ಹಂಚಿಕೊಂಡಿರುವ ಸಿ.ಟಿ.ರವಿ, ‘ತಾಯಿಯೊಬ್ಬಳು ಕಲಿಸಿಕೊಡುವ ಸಂಸ್ಕಾರ ಇಡೀ ದೇಶಕ್ಕೆ ಮಾದರಿಯಾಗುತ್ತದೆ ಎಂಬುದು ಈ ನಾಡಿನ ಜನರ ನಂಬಿಕೆ. ಆ ನಂಬಿಕೆ ಈ ಮಾತೃಶ್ರೀ ಬದುಕಿನಲ್ಲಿ ಪ್ರತಿಬಿಂಭಿಸಿದೆ’ ಎಂದು ನೆನಪಿಸಿದ್ದಾರೆ.
ತಾಯಿ ಎಂಬ ಪದವನ್ನು ವರ್ಣಿಸಲು ಪದಗಳು ಸಾಲದು ಎಂಬುದು ಸ್ಪಷ್ಟ ಸತ್ಯ. ಆದರೂ ಮೋದಿಯಂತಹ ವ್ಯಕ್ತಿಯನ್ನು ರೂಪಿಸಿರುವ ಹೀರಾಬೆನ್ ಅವರ ವ್ಯಕ್ತಿತ್ವವೇ ವಿಭಿನ್ನ’ ಎಂದು ಅವರು ಹೇಳಿದ್ದಾರೆ.
‘ನೂಲಿನಿಂದ ಸೀರೆ’ ಎಂಬ ಉಕ್ತಿ ಎಷ್ಟು ಸರಿಯೋ ಅದೇ ರೀತಿ ಸುಸಂಸ್ಕೃತ ಮಾತೆಯೆನಿಸಿರುವ ಹೀರಾಬೆನ್ ಅವರು ಸಂಸ್ಕಾರ ಕೊಟ್ಟು ದೇಶಕ್ಕಾಗಿ ಬದುಕಬೇಕೆಂಬ ಸೂತ್ರವನ್ನು ಹೇಳಿಕೊಡುತ್ತಾ ಪುತ್ರ ಮೋದಿಯನ್ನು ಬೆಳೆಸಿದವರು. ಸಮಾಜದ, ಧರ್ಮದ ಏಳಿಗೆಯ ಆವಶ್ಯಕತೆಯನ್ನು ಮಗನಿಗೆ ಹೇಳಿಕೊಡುತ್ತಾ ಪರಮ ದೇಶಭಕ್ತನನ್ನಾಗಿ ರೂಪಿಸಿರುವ ಹೀರಾಬೆನ್ ಅವರನ್ನು ‘ಶತಮಾನದ ಶತಾಯುಷಿ’ ಎಂದರೆ ಅದುವೇ ಸತ್ಯ ಎಂದು ಸಿ.ಟಿ.ರವಿ ಹೇಳಿದ್ದಾರೆ.
Hiraben Ma might have left this World but She will continue to live in the hearts of Bharatiyas whose life has been transformed by Her Son, PM Shri @narendramodi.
On behalf of all Bharatiyas, I bow down to pay my last respects to Hiraben Ma for blessing us with "The KarmaYogi". pic.twitter.com/TQ5BrW7mM7
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) December 30, 2022





















































