ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾದ ಸಮನ್ಸ್ ಅನ್ನು ಪಾಲಿಸದಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ದೆಹಲಿಯ ನ್ಯಾಯಾಲಯದಲ್ಲಿ ತನ್ನ ಎರಡನೇ ದೂರನ್ನು ದಾಖಲಿಸಿದೆ.
ರೋಸ್ ಅವೆನ್ಯೂ ಕೋರ್ಟ್‌ನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ದಿವ್ಯಾ ಮಲ್ಹೋತ್ರಾ ಬುಧವಾರ ಮಾರ್ಚ್ 7 ರಂದು ವಿಚಾರಣೆಯನ್ನು ಮುಂದೂಡಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಡಿ ಸಲ್ಲಿಸಿದ ಮೊದಲ ದೂರಿಗೆ ಸಂಬಂಧಿಸಿದಂತೆ ಎಸಿಎಂಎಂ ಫೆಬ್ರವರಿ 17ರಂದು ಕೇಜ್ರಿವಾಲ್‌ಗೆ ಖುದ್ದು ಹಾಜರಾತಿಗೆ ಒಂದು ದಿನದ ವಿನಾಯಿತಿ ನೀಡಿತ್ತು. ಇದೀಗ ಕೋರ್ಟ್ ಮಾರ್ಚ್ 16ಕ್ಕೆ ಈ ವಿಚಾರಣೆಯನ್ನು ಮುಂದೂಡಿತ್ತು.