ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನರ ಹೆಮ್ಮೆಯ ಸಾರಿಗೆ ಸಂಸ್ಥೆ BMTC (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಇದೀಗ ತನ್ನ ನಿಗಮದ ನೌಕರರಿಗೆ ಮತ್ತಷ್ಟು ಕಾರ್ಮಿಕ ಸ್ನೇಹಿಯಾಗುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ.
ಬಿಎಂಟಿಸಿಯ ಎಲ್ಲಾ ವಿಭಾಗ/ವಲಯಗಳ ನೌಕರರ ಶಿಸ್ತು ಪ್ರಕರಣಗಳ ಮೇಲ್ಮನವಿಯನ್ನು ನಿಗದಿತ ಸಮಯದಲ್ಲಿ ತೀರ್ಮಾನಿಸಲು ನಿರ್ದೇಶಕರಿಗೆ ಅಧಿಕಾರ ನೀಡಲಾಗಿತ್ತು. ನಿರ್ದೇಶಕರೊಬ್ಬರು ಎಲ್ಲಾ ಪ್ರಕರಣಗಳಲ್ಲಿ ಕಾಲಮಿತಿಯೊಳಗೆ ವಿಲೇವಾರಿ ಮಾಡುವುದು ಕಷ್ಟಸಾಧ್ಯವಾಗಿತ್ತು. ಇದು ಕಾರ್ಮಿಕರಲ್ಲಿ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿತ್ತು.
ಬಿಎಂಟಿಸಿಯ ಅಧ್ಯಕ್ಷರು ಆಗಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು 12.03.2024ರಂದು ಅಧಿಕಾರ ವಿಕೇಂದ್ರೀಕರಣಕ್ಕೆ ಅನುಮೋದಿಸಿ ಮಹತ್ವದ ಕ್ರಮಕ್ಕೆ ಮುನ್ನುಡಿ ಬರೆದಿದ್ದಾರೆ.. ಅದರಂತೆ, ಕರಾರಸಾ ನಿಗಮದ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿ 1971 ರ ನಿಯಮಾವಳಿ 31 ರನ್ವಯ ನಿಗಮದ ದರ್ಜೆ-3 ಮತ್ತು ದರ್ಜೆ-4 ನೌಕರರ ಮೇಲ್ಮನವಿ ಪ್ರಾಧಿಕಾರಗಳನ್ನು ನಿರ್ಧಿಷ್ಟಪಡಿಸುವ ಅಧಿಕಾರವನ್ನು ಇಲಾಖಾ ಮುಖ್ಯಸ್ಥರುಗಳಿಗೆ ನೀಡಲಾಗಿದೆ.
BMTCಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿರುವ (ನಡತೆ & ಶಿಸ್ತು) ನಿಯಮಾವಳಿ 1971 ಹಾಗೂ ಆನಂತರದ ತಿದ್ದುಪಡಿಗಳನ್ನು ಯಥಾವತ್ತಾಗಿ ಅಳವಡಿಸಿಕೊಂಡಿದ್ದು, ಸದರಿ ನಿಯಮಗಳ ವಿನಿಯಮಾವಳಿ-31 ರನ್ವಯ ಸಂಸ್ಥೆಯ ದರ್ಜೆ-03 ಮತ್ತು ರ್ಜೆ-04 ನೌಕರರುಗಳ (ಮೇಲ್ವಿಚಾರಕ ಸಿಬ್ಬಂದಿಗಳು ಸೇರಿದಂತೆ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಈ ಕೆಳಕಂಡಂತೆ ಮೇಲ್ಮನವಿ ಪ್ರಾಧಿಕಾರಿಗಳನ್ನು ನಿರ್ಧಿಷ್ಟಪಡಿಸಲಾಗಿದೆ.
- ಉತ್ತರ ವಲಯ – ಮುಖ್ಯ ಲೆಕ್ಕಾಧಿಕಾರಿ
- ದಕ್ಷಿಣ ವಲಯ ಮತ್ತು ಕೇಂದ್ರೀಯ ಕಾರ್ಯಾಗಾರ-! – ಮುಖ್ಯ ಗಣಕ ವ್ಯವಸ್ಥಾಪಕರು
- ಪೂರ್ವ ವಲಯ – ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು
- ಪಶ್ಚಿಮ ವಲಯ – ಮುಖ್ಯ ಕಾನೂನು ಅಧಿಕಾರಿ
- ಈಶಾನ್ಯ ವಲಯ – ಮುಖ್ಯ ತಾಂತ್ರಿಕ ಅಭಿಯಂತರರು
- ಕೇಂದ್ರೀಯ ವಲಯ ಮತ್ತು ವಾಯುವ್ಯ ವಲಯ – ಉಗ್ರಾಣ ಮತ್ತು ಖರೀದಿ ನಿಯಂತ್ರಕರು.
ಈ ಕ್ರಮವನ್ನು ಕಾರ್ಮಿಕ ವಲಯ ಸ್ವಾಗತಿಸಿದೆ. ಈ ವಿಚಾರದಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರ ಕ್ರಮ ಅಭಿನಂದನಾರ್ಹ ಎಂದು ಕಾರ್ಮಿಕ ಸಂಘಟನೆಗಳು ಬಣ್ಣಿಸಿವೆ.