ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿಗೆ ಅಸಂಖ್ಯ ಜನ ಬಲಿಯಾಗಿದ್ದಾರೆ. ನಿತ್ಯವೂ ರಾಜ್ಯದಲ್ಲಿ ಸಾವಿರಾರು ಜನರು ಸೋಂಕಿಗೊಳಗಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಉಪಸ್ಥಿತಿಯಲ್ಲಿ ವಿಧಾನ ಮಂಡಲದ ಉಭಯ ಸದನಗಳ ಪ್ರಮುಖರ ಸಭೆ ಗಮನಸೆಳೆಯಿತು.
ಬೆಂಗಳೂರು ಸಹಿತ ರಾಜ್ಯದ ಪ್ರಮುಖ ನಗರಗಳಲ್ಲಿ ಕಠಿಣ ನಿಯಮ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ರಾಜಧಾನಿ ನಗರಿ ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ಸಿನಿಮಾ ಮಂದಿರಗಳು, ಬಾರ್-ಪಬ್‌ಗಳ ಸಹಿತ ಪ್ರಮುಖ ಉದ್ದಿಮೆ ಕೇಂದ್ರಗಳ ಚಟುವಟಿಕೆಗಳಿಗೆ ಅಂಕುಶ ಹಾಕಬೇಕೆಂಬ ಆಗ್ರಹ ಕೇಳಿಬಂತು.
ಮುಖ್ಯವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಲಾಕ್‌ಡೌನ್ ಜಾರಿಗೆ ಸಲಹೆ ಮಾಡಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು 144 ಸೆಕ್ಷನ್ ಜಾರಿ ಮಾಡಿ ಸೋಂಕು ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡಾ ಲಾಕ್‌ಡೌನ್ ಪರ ಒಲವು ವ್ಯಕ್ತಪಡಿಸಿದರು. ಸೋಂಕು ಹೆಚ್ಚಿರುವ ಕಡೆ ವೀಕೆಂಡ್ ಲಾಕ್‌ಡೌನ್ ಜಾರಿ ಮಾಡುವಂತೆ ಹೊರಟ್ಟಿ ಸಲಹೆ ಮಾಡಿದರು.
ರಾಜ್ಯಪಾಲರ ನಿರ್ದೇಶನ:
ಇದೇ ವೇಳೆ, ಪ್ರತಿಪಕ್ಷಗಳ ನಾಯಕರ ಸಲಹೆಗಳನ್ನು ಪರಿಗಣಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಸಭೆಯಲ್ಲಿ ಭರವಸೆ ನೀಡಿದರರು. ಅದಾಗಲೇ ಸಭೆಯ ಅಧ್ಯಕ್ಷತೆ ವಹಿಸಿದ ರಾಜ್ಯಪಾಲ ವಜುಬಾಯಿ ವಾಲಾ ಕೂಡಾ ಲಾಕ್‌ಡೌನ್ ಜಾರಿಗೆ ಸಲಹೆ ಮಾಡಿದರು. ಜನರು ಸಾವಿನಿಂದ ಸಾಯುವುದಿಲ್ಲ ಎಂಬ ವಿಶ್ವಾಸ ಇದೆ. ಹಾಗಾಗಿ ಲಾಕ್‌ಡೌನ್ ಮಾಡೋದಾದ್ರೆ ಮಾಡಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದರು.