ಕೊಪ್ಪಳ: ಬಿಜೆಪಿಯ ಭಿನ್ನಮತದ ಬಿರುಗಾಳಿಗೆ ತತ್ತರಿಸಿದ ಕೊಪ್ಪಳ ಜಿಲ್ಲಾ ಬಿಜೆಪಿಗೆ ಈ ಬಾರಿಯ ಲೋಕಸಭಾ ಕ್ಷೇತ್ರದ ಫಲಿತಾಂಶ ನಿರಾಸೆ ತಂದಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಜಯಭೇರಿ ಭಾರಿಸಿದ್ದಾರೆ. 45,000 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಸಿಗದಿದ್ದರಿಂದ ಕುಪಿತರಾಗಿದ್ದ ಸಂಸದ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಸೇರಿದ್ದರು. ಅದಾಗಲೇ ಬಿಜೆಪಿಯೊಳಗಿನ ಭಿನ್ನಮತ ಪಕ್ಷಕ್ಕೆ ಬಲವಾದ ಹೊಡೆತ ಬೀಡಿತು. ಇದೀಗ ಬಿಜೆಪಿ ನಾಯಕರ ಅತೃಪ್ತಿಯೇ ಪಕ್ಷದ ಸೋಲಿಗೆ ಕಾರಣವಾಗಿದೆ ಎಂಬ ವೀಶ್ಲೇಷಣೆ ಸಾಗಿದೆ.






















































