ನವದೆಹಲಿ: ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ವಿಧಿವಶರಾಗಿದ್ದಾರೆ. 88 ವರ್ಷ ವಯಸ್ಸಿನ ಪೋಪ್ ಫ್ರಾನ್ಸಿಸ್ ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
ಇತ್ತೀಚೆಗೆ ನ್ಯುಮೋನಿಯಾ ಕಾರಣದಿಂದಾಗಿ (ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ವ್ಯಾಟಿಕನ್’ಗೆ ಮರಳಿದ್ದರು. ಪೋಪ್ ಫ್ರಾನ್ಸಿಸ್ ಕಳೆದೊಂದು ವಾರದಿಂದ ಶ್ವಾಸಕೋಶ ಸಂಬಂಧಿತ ಸೋಂಕಿನಿಂದ ಬಳಲುತ್ತಿದ್ದರು.
ಈ ಸುದ್ದಿಯನ್ನು ಇಂಗ್ಲಿಷ್’ನಲ್ಲೂ ಓದಿ..
![]()
Pope Francis dies at 88, announces Vatican
ಕಳೆದ ವಾರ ಸೇಂಟ್ ಪೀಟರ್ಸ್ ಚೌಕ್ನಲ್ಲಿ ಕ್ಯಾಥೋಲಿಕ್ ಚರ್ಚ್‌ನ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪೋಪ್ ಫ್ರಾನ್ಸಿಸ್ ಭಾಗವಹಿಸಿರಲಿಲ್ಲ. ಸೋಮವಾರ ಬೆಳಿಗ್ಗೆ 7:35 ರ ಸುಮಾರಿಗೆ ಪೋಪ್ ಫ್ರಾನ್ಸಿಸ್ ಅವರು ಕೊನೆಯುಸಿರೆಳೆದರೆಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ.