ಬೆಂಗಳೂರು: ಭಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ನಿಲುವನ್ನು ಖಂಡಿಸಿರುವ ಸಚಿವ ಸುನಿಲ್ ಕುಮಾರ್, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪಿ.ಎಫ್.ಐ ಮತ್ತು ಬಜರಂಗದಳವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಪ್ರಯತ್ನ ನಡೆಸಿರುವುದು ಕಾಂಗ್ರೆಸ್ ನ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಬಜರಂಗದಳವನ್ನು ನಿಷೇಧ ಮಾಡುವುದು ಒಂದೇ, ದೇಶಪ್ರೇಮವನ್ನು ನಿಷೇಧ ಮಾಡುವುದು ಒಂದೇ.. ಹಾಗಾದರೇ ಕಾಂಗ್ರೆಸ್ ದೇಶಪ್ರೇಮವನ್ನು ನಿಷೇಧಿಸಲು ಹೊರಟಿದೆಯೇ…? ಎಂದು ಸಚಿವ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪಿ.ಎಫ್.ಐ ಮತ್ತು ಬಜರಂಗದಳವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಪ್ರಯತ್ನ ನಡೆಸಿರುವುದು ಕಾಂಗ್ರೆಸ್ ನ ವಿಕೃತ ಮನಸ್ಥಿತಿಗೆ ಸಾಕ್ಷಿ. ಬಜರಂಗದಳವನ್ನು ನಿಷೇಧ ಮಾಡುವುದು ಒಂದೇ, ದೇಶಪ್ರೇಮವನ್ನು ನಿಷೇಧ ಮಾಡುವುದು ಒಂದೇ.. ಹಾಗಾದರೇ ಕಾಂಗ್ರೆಸ್ ದೇಶಪ್ರೇಮವನ್ನು ನಿಷೇಧಿಸಲು ಹೊರಟಿದೆಯೇ…? pic.twitter.com/aZyuoFzaYj
— Sunil Kumar Karkala (Modi Ka Parivar) (@karkalasunil) May 2, 2023