ಬೆಂಗಳೂರು: ಲೋಕಸಭಾ ಚುನಾವಣಾ ಕಣ ರಂಗೇರಿದೆ. ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಬೆಂಗಳೂರಿನ ನ್ಯಾಯಾಲಯಗಳಿಗೆ ತೆರಳಿ ವಕೀಲರ ಬೆಂಬಲ ಯಾಚಿಸದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು ಮನ್ಸೂರ್ ಆಲಿ ಖಾನ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಮೇದುವಾರರಾದ ರಾಜೀವ್ ಗೌಡ ಅವರು, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಉಪಸ್ಥಿತಿಯಲ್ಲಿ ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್ ಸಹಿತ ಬೆಂಗಳೂರಿನ ನ್ಯಾಯಾಲಯಗಳಿಗೆ ಭೇಟಿ ನೀಡಿದರು. ವಕೀಲರ ಸಂಘದ ಪ್ರಮುಖರನ್ನೂ ಭೇಟಿಯಾಗಿ ಬೆಂಬಲ ಯಾಚಿಸಿದರು.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಆಲಿ ಖಾನ್, ವಕೀಲ ವೃತ್ತಿ ಸಾಮಾಜಿಕ ಕಾಳಜಿ ಹೊಂದುವುದರೊಂದಿಗೆ ಕಷ್ಟದಲ್ಲಿರುವವರ ಕಣ್ಣೊರೆಸುವ ಪವಿತ್ರ ವೃತ್ತಿ ಆಗಿದೆ. ಅವರೊಂದಿಗೆ ಭೇಟಿಯಾಗಿ ಸಂವಾದ ನಡೆಸುವುದು ಅದೊಂದು ವಿಶೇಷ ಅನುಭವ. ವಕೀಲರಿಗೆ ಸಮಾಜದಲ್ಲಿ ಅತ್ಯಂತ ಗೌರವವಿದೆ ತಮ್ಮ ವೃತ್ತಿಯೊಂದಿಗೆ ಸಮಾಜ ಸೇವೆಗೈದು ಉತ್ತಮ ಸಮಾಜ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು ಎಂದಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದ ನಿಮಿತ್ತ, ಕರ್ನಾಟಕದ ಹೈಕೋರ್ಟ್ ಮತ್ತು ನಗರದ ಸಿಟಿ ಸಿವಿಲ್ ನ್ಯಾಯಾಲಯದ ಆವರಣಕ್ಕೆ ಇಂದು ಭೇಟಿ ನೀಡಿ, ವಕೀಲರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿ, ನನ್ನ ಪರವಾಗಿ ಮತಯಾಚನೆ ನಡೆಸಿದ್ದಾಗಿ ತಿಳಿಸಿದ್ದಾರೆ.
ವಕೀಲ ವೃತ್ತಿ ಸಾಮಾಜಿಕ ಕಾಳಜಿ ಹೊಂದುವುದರೊಂದಿಗೆ ಕಷ್ಟದಲ್ಲಿರುವವರ ಕಣ್ಣೊರೆಸುವ ಪವಿತ್ರ ವೃತ್ತಿ ಆಗಿದೆ. ಅವರೊಂದಿಗೆ ಭೇಟಿಯಾಗಿ ಸಂವಾದ ನಡೆಸುವುದು ಅದೊಂದು ವಿಶೇಷ ಅನುಭವ. ವಕೀಲರಿಗೆ ಸಮಾಜದಲ್ಲಿ ಅತ್ಯಂತ ಗೌರವವಿದೆ ತಮ್ಮ ವೃತ್ತಿಯೊಂದಿಗೆ ಸಮಾಜ ಸೇವೆಗೈದು ಉತ್ತಮ ಸಮಾಜ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ಅತ್ಯಂತ… pic.twitter.com/Wrm8znwjkb
— Mansoor Khan (@MansoorKhanINC) April 15, 2024






















































