ಬೀದರ್: ರಾಜ್ಯದಲ್ಲಿ ಈ ಬಾರಿ ಉಪಚುನಾವಣೆಯನ್ನು ಪ್ರತಿಷ್ಟೆಯಾಗಿ ಸ್ವೀಕರಿಸಿದ್ದ ಬಿಜೆಪಿಗೆ ಕ್ಷೇತ್ರ ನಷ್ಟವಾಗಿಲ್ಲ, ಆದರೆ ಮಾನ ಕಾಪಾಡಿಕೊಂಡಿದೆ ಎಂಬ ಸಮಾಧಾನದ ಫಲಿತಾಂಶ ಕಮಲ ನಾಯಕರಿಗೆ ಸಿಕ್ಕಿದೆ. ಆಪರೇಷನ್ ಕಮಲದಿಂದ ತೆರವಾಗಿದ್ದ ಮಸ್ಕಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲಾಗದಿದ್ದರೂ ಬಿಜೆಪಿಯು ಬಸವಕಲ್ಯಾಣ ಕ್ಷೇತ್ರದಲ್ಲಿ ಜಯ ಸಾಧಿಸಿದೆ.
ಕಾಂಗ್ರೆಸ್ ಶಾಸಕರಾಗಿದ್ದ ಬಿ.ನಾರಾಯಣ ರಾವ್ ಅವರ ನಿಧನದಿಂದ ತೆರವಾಗಿದ್ದ ಬಸವಕಲ್ಯಾಣ ಕ್ಷೇತ್ರದಲ್ಲಿ ಅನುಕಂಪದ ಅಲೆಯನ್ನು ನಿರೀಕ್ಷಿಸದ್ದ ಕಾಂಗ್ರೆಸ್ ನಾಯಕರಿಗೆ ಈ ಫಲಿತಾಂಶದಿಂದ ನಿರಾಶೆಯುಂಟಾಗಿದೆ.
ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಅವರು, ಕಾಂಗ್ರೆಸ್ ನ ಹುರಿಯಾಳು ಮಾಲಾ ಬಿ ನಾರಾಯಣ ರಾವ್ ಅವರ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಶರಣು ಸಲಗಾರ್ ಅವರು ಅಂತಿಮವಾಗಿ 20,904 ಮತಗಳಿಂದ ವಿಜಯಿಯಾಗಿದ್ದಾರೆ.
ಯಾರಿಗೆ ಎಷ್ಟು ಮತ..?
ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಅವರು 70,556 ಮತಗಳನ್ನು ಗಳಿಸಿದರೆ ಕಾಂಗ್ರೆಸ್ ನ ಹುರಿಯಾಳು ಮಾಲಾ ಬಿ ನಾರಾಯಣ ರಾವ್ ಅವರು 50,108 ಮರಗಳನ್ನು ಗಳಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರಯಖೂಬಾ ಅವರು 9,390 ಮತಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯದಲ್ಲಿ ಭರ್ಜರಿ ಲೆಕ್ಕಾಚಾರಕ್ಕೆ ಎಢಮಾಡಿಕೊಟ್ಟಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿ ಸಯ್ಯದ್ ಅವರು 11,390 ಮತಗಳನ್ನು ಗಳಿಸುವಲ್ಲಷ್ಟೇ ಶಕ್ತರಾದರು.